RBI ಅಡಿಯಲ್ಲಿ ಸಹಕಾರಿ ಬ್ಯಾಂಕ್‌ಗಳು

RBI ಅಡಿಯಲ್ಲಿ ಸಹಕಾರಿ ಬ್ಯಾಂಕ್‌ಗಳು: ಲೋಕಸಭೆಯಲ್ಲಿ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಪಾಸ್

ಹೊಸದಿಲ್ಲಿ: ದೇಶದ ಸಹಕಾರಿ ಬ್ಯಾಂಕುಗಳು ಮತ್ತು ವಾಣಿಜ್ಯ ಬ್ಯಾಂಕುಗಳ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಬುಧವಾರ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಅಂಗೀಕಾರವಾಗಿದೆ. ಈ ಮಸೂದೆ 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. 

ಈ ಹೊಸ ಮಸೂದೆಯೊಂದಿಗೆ, ಕೇಂದ್ರ ಸರ್ಕಾರವು ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೇಲ್ವಿಚಾರಣೆಯಲ್ಲಿ ತರಲು ಉದ್ದೇಶಿಸಿದೆ. ಬ್ಯಾಂಕುಗಳಲ್ಲಿನ ಕೆಲವು ದುರದೃಷ್ಟಕರ ಪರಿಸ್ಥಿತಿಯಂತೆ, ಠೇವಣಿದಾರರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಅವರ ರಕ್ಷಣೆಗೆ ಎಂದು ಈ ಮಸೂದೆ ತರಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬುಧವಾರ ಹೇಳಿದರು. 

ಕಳೆದ ಎರಡು ವರ್ಷಗಳಿಂದ, ಸಹಕಾರಿ ಬ್ಯಾಂಕುಗಳು ಮತ್ತು ಸಣ್ಣ ಬ್ಯಾಂಕುಗಳ ಠೇವಣಿದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಠೇವಣಿದಾರರನ್ನು ರಕ್ಷಿಸುವ ಸಲುವಾಗಿ ನಾವು ಈ ತಿದ್ದುಪಡಿಯನ್ನು ತರಲು ಪ್ರಯತ್ನಿಸುತ್ತಿದ್ದೇವೆ. ಏಕೆಂದರೆ ಈ ಬ್ಯಾಂಕುಗಳು ಕಠಿಣ ದಿನಗಳಲ್ಲಿ ಸಿಲುಕಿಕೊಂಡಿವೆ, ಆದ್ದರಿಂದ ನಿಯಂತ್ರಕವು ನಿಷೇಧವನ್ನು ತರಲು ಮತ್ತು ಸಮಸ್ಯೆಯನ್ನು ಪರಿಹರಿಸುವುದು ಈ ಕಾಯಿದೆ ಉದ್ದೇಶವಾಗಿದೆ ಅಂತ ಇದೇ ವೇಳೆ ಹಣಕಾಸು ಸಚಿವೆ ಸದನಕ್ಕೆ ತಿಳಿಸಿದರು.

ಈ ಮಸೂದೆ ಸಹಕಾರಿ ಬ್ಯಾಂಕುಗಳನ್ನು ನಿಯಂತ್ರಿಸುವುದಿಲ್ಲ. ಈ ತಿದ್ದುಪಡಿಯು ಕೇಂದ್ರ ಸರ್ಕಾರವು ಸಹಕಾರಿ ಬ್ಯಾಂಕುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಲ್ಲ ಅಂತ ಸೀತಾರಾಮನ್ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply