ವಾಯು ಸೇನಾ ದಿನಕ್ಕೆ ಶುಭಾಶಯ ಕೋರಿದ ಪ್ರಧಾನಿ

ನವದೆಹಲಿ: ಇಂದು 88 ನೇ ವಾಯುಸೇನಾ ದಿನದ ಪ್ರಯುಕ್ತ ವಾಯುಪಡೆಯ ಯೋಧರಿಗೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ವಾಯುಸೇನಾ ದಿನದಂದು ವಾಯುಪಡೆಯ ವೀರ ಯೋಧರಿಗೆ ಅಭಿನಂದನೆಗಳು.

ನೀವೆಲ್ಲರೂ ದೇಶದ ಆಕಾಶವನ್ನು ಸುರಕ್ಷಿತವಾಗಿರಿಸುತ್ತೀರಿ, ಅದಲ್ಲದೆ ಆಪತ್ತಿನ ಕಾಲದಲ್ಲಿ ಮಾನವೀಯತೆ ಮೆರೆಯು ತ್ತೀರಿ. ಭಾರತ ಮಾತೆಯನ್ನು ರಕ್ಷಿಸಲಿರುವ ನಿಮ್ಮ ಧೈರ್ಯ, ಶೌರ್ಯ ಮತ್ತು ಸಮರ್ಪಣಾ ಭಾವ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

 
 
 
 
 
 
 
 
 
 
 

Leave a Reply