‘ಸಿದ್ಧವನ’ದಲ್ಲಿ ಕುಳಿತಿದ್ದ ‘ರಾಮ’ನಿಗೂ ಗೊತ್ತಿತ್ತು~ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ‘ಎದೆ ಸೀಳಿದರೆ ಸಿದ್ದು ಕಾಣುತ್ತಾರೆ’ ಎಂಬ ಅದೇಷ್ಟೋ ಅನುಯಾಯಿಗಳು ಬಿಜೆಪಿಗೆ ಹೋಗಲು ಮಸಲತ್ತು ರೂಪಿಸಿದ್ದು ಯಾರು ಎಂದು ‘ಸಿದ್ಧವನ’ದಲ್ಲಿ ಕುಳಿತಿದ್ದ ‘ರಾಮ’ನಿಗೂ ಗೊತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಈ ಕುರಿತಂತೆ ಹೆಚ್.ಡಿ.ಕೆ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ್ದಲ್ಲಿ ಇದ್ದಾಗಲೇ ಮತ್ತೆ ಅಧಿಕಾರ ನೀಡದೆ ರಾಜ್ಯದ ಜನತೆ ತಕ್ಕ ಪ್ರಯೋಗ ಮಾಡಿದರು. ಇನ್ನು ಈಗ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂಬ ಸಿದ್ದರಾಮಯ್ಯ ಅವರ ಮಾತು ಕೇವಲ ಭ್ರಮೆ ಎಂದು ಹೇಳಿದ್ದಾರೆ.

ರಾಜ್ಯದ ಜನರ ಒಳಿತಿಗಾಗಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸುವಲಾಗದೆ ಸಿದ್ದರಾಮಯ್ಯನವರ ಅಗ್ಗದ ಯೋಜನೆಗಳ ಮೂಲಕ ಜನರ ತುಟಿಗೆ ತುಪ್ಪ ಸವರುವಂತೆ ವರ್ತಿಸಿದ್ದ ಆಡಳಿತಕ್ಕೆ ಕಳೆದ ಬಾರಿ ಜನರೆ ತಕ್ಕ ಶಾಸ್ತಿ ಮಾಡಿದ್ದರು. ಇವರ ಅಂದಿನ ದುರಾಡಳಿತವನ್ನು ಜನತೆ ಇನ್ನೂ ಮರೆತಿಲ್ಲ. ಈಗೀನ ಉಪಚುನಾವಣೆ ಯಲ್ಲೂ ಕಾಂಗ್ರೆಸ್ ಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದಿದ್ದಾರೆ.

ಇನ್ನು ನಮ್ಮ ಮೂವರು ಶಾಸಕರು ಪಕ್ಷದಿಂದ ಹೊರಹೋಗಲು ನಡೆದಿದ್ದ ಸಂಚಿನಲ್ಲಿ ಹಣ ಅಧಿಕಾರದ ಆಮಿಷ ಮಾತ್ರವಲ್ಲ, ಕೆಲವರ ‘ಕೈ’ವಾಡ ಕೂಡ ಕಾರಣ. ಮೈತ್ರಿ ಸರ್ಕಾರವನ್ನು ಉರುಳಿಸಲು ಅಳಲೇಕಾಯಿ ಪಂಡಿತ ನಂತೆ ಔಷಧ ಅರೆದ ವ್ಯಕ್ತಿಗಾಗಿ ನಮ್ಮ ಮೂವರು ಶಾಸಕರು ಕದ್ದು ಓಡಿ ಹೋದರೋ? ಅಥವಾ ನಾವೇ ಕತ್ತು ಹಿಡಿದು ನೂಕಿದವೋ? ಎಂದು ಗೊತ್ತಿಲ್ಲದ ಜಾಣ ಪೆದ್ದನಾಗಿದ್ದು ವಿಪರ್ಯಾಸ ಎಂದು ಟೀಕಿಸಿದ್ದಾರೆ.

 
 
 
 
 
 
 
 
 
 
 

Leave a Reply