ಅಯೋಧ್ಯೆ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ​ನಮೋ 

 

ಅಯೋಧ್ಯೆ : ಉತ್ತರಪ್ರದೇಶದ ವಾರಣಾಸಿಯ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ಪ್ರಧಾನಿ ಮೋದಿ ಶಿಲಾ ನ್ಯಾಸ ನೆರವೇರಿಸಿದರು. ಕೋಟಿ ಕೋಟಿ ಭಾರತೀಯರು ಕಾದು ಕುಳಿತಿರುವ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಐತಿ ಹಾಸಿಕ ರಾಮ ಮಂದಿರ ನಿರ್ಮಾಣದ ಕನಸಿಗೆ ಅಡಿಗಲ್ಲು ಹಾಕಲಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ಮಾಡಿ ಶಿಲಾನ್ಯಾಸ ಮಾಡಿದ್ದಾರೆ. ಈ ಮೂಲಕ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ವಿಮಾನದಲ್ಲಿ ವಾರಣಾಸಿಗೆ ಬಂದಿಳಿದ ಮೋದಿ, ಹೆಲಿಕಾಪ್ಟರ್ ನಲ್ಲಿ ಅಯೋಧ್ಯೆಗೆ ಬಂದು ಮೊದಲು ಹನುಮಾನ್ ಗಡಿಯಲ್ಲಿ ಪೂಜೆ ಸಲ್ಲಿಸಿ, ರಾಮನ ಭಂಟ ಹನುಮಾನನ ಆಶೀರ್ವಾದ ಪಡೆದು ಬಳಿಕ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ​​

ಶ್ರೀರಾಮಂದಿರದ ಶಿಲಾನ್ಯಾಸ ಕಾರ್ಯಕ್ರಮ karavlixpress.com  ನೇರ ಪ್ರಸಾರವನ್ನು ನಿರಂತರ  ಮಾಡುತ್ತಿದೆ 

Leave a Reply