Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಪ್ರಸಿದ್ಧ ಪುಣ್ಯಕ್ಷೇತ ಮಂತ್ರಾಲಯ ಜಲಾವೃತ

ರಾಯಚೂರು: ಪ್ರಸಿದ್ಧ ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಕಳೆದ ರಾತ್ರಿಯಿಂದ ಧಾರಾಕಾರ ಮಳೆ ಸುರಿದ ಪರಿಣಾಮ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದೊಳಗೆ ನೀರು ನುಗ್ಗಿದೆ.

ಮಂತ್ರಾಲಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ತುಂಗಾನದಿ ನೀರು ಉಕ್ಕಿ ಹರಿದು ಸ್ಥಳೀಯ ಕರ್ನಾಟಕ ಗೆಸ್ಟ್ ಹೌಸ್ ಸಂಪೂರ್ಣ ಜಲಾವೃತಗೊಂಡಿದೆ. ಅದರಿಂದಾಗಿ ಗೆಸ್ಟ್ ಹೌಸ್ ಆವರಣದಲ್ಲಿನ ವಾಹನಗಳು ತೇಲಾಡುತ್ತಿದ್ದು, ಮುಂಭಾಗದ ರಸ್ತೆಯಲ್ಲಿಯೂ ಅಪಾರ ಪ್ರಮಾಣದಲ್ಲಿ ಮಳೆ ನೀರು ನಿಂತಿದೆ.

ಕಳೆದ ಜೂ. 22ರಿಂದ ರಾಯರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ರಾಯರ ದರ್ಶನಕ್ಕೆ ತೆರಳುವ ಭಕ್ತರ ಸಂಚಾರಕ್ಕೆ ಭಾರೀ ಅಡಚಣೆಯುಂಟಾಗಿದೆ. ರಾಯರ ದರ್ಶನಕ್ಕಾಗಿ ಬಂದು ಕರ್ನಾಟಕ ಗೆಸ್ಟ್ ಹೌಸ್ ನಲ್ಲಿ ತಂಗಿದ್ದ ಭಕ್ತರು ತೊಂದರೆ ಎದುರಿಸುತ್ತಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!