ಕೇಂದ್ರ ಸರಕಾರದ ಮುಂದೆ ಹೊಸ ಬೇಡಿಕೆಯಿಟ್ಟ ಮಮತಾ ಬ್ಯಾನರ್ಜಿ!

ಅಗ್ನಿಪಥ್ ಯೋಜನೆಯಡಿ ನೇಮಕವಾಗುವ ಯೋಧರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ವಿಸ್ತರಿಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮಮತಾ ಬ್ಯಾನರ್ಜಿ, ಅಗ್ನಿಪಥ್ ಯೋಜನೆಯಡಿ ನೇಮಕವಾಗುವ ಯೋಧರಿಗೆ ನಾಲ್ಕು ತಿಂಗಳ ಕಾಲ ತರಬೇತಿ ನೀಡಿ, ನಾಲ್ಕು ವರ್ಷಗಳಿಗೆ ನೇಮಕ ಮಾಡಲಾಗುತ್ತದೆ. ಆದರೆ ನಾಲ್ಕು ವರ್ಷಗಳ ನಂತರ ಈ ಯೋಧರು ಏನು ಮಾಡುತ್ತಾರೆ? ಅವರ ಮುಂದಿನ ಭವಿಷ್ಯವೇನು? ಇದು ಅಸ್ಥಿರವಾಗಿದೆ. ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

 
 
 
 
 
 
 
 
 
 
 

Leave a Reply