ಕಾಶ್ಮೀರದ ಕುಲ್ಗಾಮ್​ ಎನ್‌ಕೌಂಟರ್​ ನಲ್ಲಿ ಇಬ್ಬರು ಉಗ್ರ​ರ ಹೊಡೆದುರುಳಿಸಿದ ಸೇನಾ ಪಡೆ

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಟ್ರುಬ್ಜಿ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ.​ ​

ಕುಲ್ಗಾಮ್‌ನ ಟ್ರುಬ್ಜಿ ಪ್ರದೇಶದ ನೌಪೋರಾ-ಖೇರ್ಪೋರಾದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಸೇನಾಪಡೆಗಳು ಕಾರ್ಯಾಚರಣೆಗೆ ನಡೆಸಲಾಗಿದ್ದು, ಈ ವೇಳೆ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.​ ಹತ್ಯೆಗೀಡಾದ ಉಗ್ರರ ಗುರುತು ಮತ್ತು ಗುಂಪು ಸಂಬಂಧವನ್ನು ಇನ್ನೂ ಖಚಿತಪಡಿಸಲಾಗಿಲ್ಲ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.

 
 
 
 
 
 
 
 
 
 
 

Leave a Reply