ತೆಲುಗಿನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಮೂರನೇ ಮದುವೆ

ಪವಿತ್ರಾ ಲೋಕೇಶ್‌ ನಿರ್ಧಾರದಿಂದ ಮತ್ತೊಂದು ಹೆಣ್ಣಿನ ಬದುಕು ನೋಡಿ ತೆಲುಗಿನ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಇಬ್ಬರೂ ಮೂರನೇ ಮದುವೆಯಾಗಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಈಗ ಗುಟ್ಟಾಗಿ ಮದುವೆಯಾಗಿದ್ದಾರೆ. ಬಹಳ ದಿನಗಳಿಂದ ಇಬ್ಬರೂ ಲಿವ್‌ ಇನ್ ರಿಲೇಶನ್‌ ಶಿಪ್‌ನಲ್ಲಿದ್ದರು ಎಂದು ಹೇಳಲಾಗುತ್ತದೆ. ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಮಹಾಬಲೇಶ್ವರಕ್ಕೆ ಹೋಗಿ ಸ್ವಾಮೀಜಿಯಿಂದ ಆಶೀರ್ವಾದ ಪಡೆದಿದ್ದರು. ಈ ವೀಡಿಯೋ ಮೂಲಕ ಇಬ್ಬರೂ ಮದುವೆಯಾಗಿದ್ದಾರೆ ಎಂದು ಸುದ್ದಿಯಾಗಿದೆ.

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಣ್ಣ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ. ಪತಿ ಸುಚೇಂದ್ರ ರಿಂದ ದೂರಾಗಿದ್ದಾರೆ ಇದು ನರೇಶ್ ಹಾಗೂ ಪವಿತ್ರಾ ಇಬ್ಬರಿಗೂ ಕೂಡ ಮೂರನೇ ಮದುವೆ. ಈ ಮೊದಲು ಸಾಫ್ಟ್‌ ವೇರ್‌ ಎಂಜಿನಿಯರ್‌ ನನ್ನು ಮದುವೆಯಾಗಿದ್ದ ಪವಿತ್ರಾ ಅವರು 2007ರಲ್ಲಿ ಸುಚೇಂದ್ರ ಅವರೊಂದಿಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಗ ಇಬ್ಬರೂ ಬೇರೆಯಾಗಿದ್ದು, ಪವಿತ್ರಾ ನರೇಶ್‌ ರನ್ನು ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.

 
 
 
 
 
 
 
 
 

Leave a Reply