ಚಾಣಕ್ಯ ಶಾ ಒಂದೇ ಇಶಾರೆಗೆ ಶಾರದಾ ಪೀಠ ದರ್ಶನಕ್ಕೆ ಪಿಒಕೆ ಅಸೆಂಬ್ಲಿ ಅನುಮತಿ !

ಬಹುಷಃ ಕಾಶ್ಮೀರವವನ್ನು ಸರಿದಾರಿಗೆ ತರುವ ಪೂರ್ತಿ ಹೊಣೆಗಾರಿಕೆಯನ್ನು ಅಮಿತ್ ಶಾ ತಾನೊಬ್ಬರೇ ವಹಿಸಿಕೊಂಡ ಹಾಗೆ ಕಾಣುತ್ತದೆ. ಜಮ್ಮುಕಾಶ್ಮೀರಕ್ಕೆ ಇದ್ದ ಪ್ರತ್ಯೇಕ ಸ್ಥಾನಮಾನವನ್ನು ಕಿತ್ತೆಸೆದು ಭಾರತದ ಜೊತೆಗೆ ವಿಲೀನಗೊಳಿಸಿದ ಮೋದಿ ಸರಕಾರ ಈಗ ಪಾಕ್ ಆಕ್ರಮಿತ ಕಾಶ್ಮೀರದ ಕಡೆಗೆ ದೃಷ್ಟಿ ನೆಟ್ಟಿದೆ. ನೆಹರು ಅವಧಿಯಲ್ಲಿ ಭಾರತದ ಕೈ ತಪ್ಪಿ ಹೋಗಿದ್ದ ಕಾಶ್ಮೀರದ ಬಹುದೊಡ್ಡ ಭೂಭಾಗವನ್ನು ವಶಪಡಿಸಿಕೊಳ್ಳಲು ಭಾರತ ರಣ ತಂತ್ರ ರೂಪಿಸಿದೆ. ಇದರ ಮೊದಲ ಹೆಜ್ಜೆಯೇ ರೋಮಾಂಚನಕಾರಿ..

ನಮಸ್ತೆ ಶಾರದಾದೇವಿ ಕಾಶ್ಮೀರಪುರವಾಸಿನಿ … ಎಂದು ನಿತ್ಯ ಹೇಳುತ್ತಿದ್ದ ಆ ಸ್ತೋತ್ರ ಕೊನೆಗೂ ಸಾಕಾರಗೊಳ್ಳುತ್ತಿದೆ.

ಕಾಶ್ಮೀರದ ಕೃಷ್ಣಗಂಗಾ ನದಿಯ ಆಚೆ ನೀಲಂ ಘಾಟಿಯಲ್ಲಿ ೫ ಸಾವಿರ ವರ್ಷ ಪುರಾತನವಾದ ಶಾರದಾ ಪೀಠವಿದೆ. ಇದು ಜ್ಞಾನ ಜಿಜ್ಞಾಸುಗಳ ಪರಮ ಕೇಂದ್ರವಾಗಿತ್ತು. ನಳಂದಾ ತಕ್ಷಶಿಲಾ ರೀತಿಯಲ್ಲೇ ಇಲ್ಲೂ ಕೂಡ ವಿಶ್ವವಿದ್ಯಾನಿಲಯವಿತ್ತು. ಜಗದ್ಗುರು ಆದಿ ಶಂಕರಾಚಾರ್ಯರ ತಪೋಭೂಮಿ ಇದು. ಕಾಶ್ಮೀರಿ ಪಂಡಿತರ ಆರಾಧ್ಯ ತಾಣವಾದ ಇದು ಜ್ಞಾನದ ಸರ್ವಜ್ಞ ಪೀಠ. ಸದ್ಯ ಇದು ಪಾಕಿಸ್ಥಾನದ ವಶದಲ್ಲಿದೆ. ಇದನ್ನು ಮುಸಲ್ಮಾನರು 1947ರಲ್ಲಿ ಸುಟ್ಟು ಭಸ್ಮ ಮಾಡಿದರು. ಅಲ್ಲಿದ್ದ ಹಿಂದೂಗಳನ್ನೆಲ್ಲಾ ಕೊಂದು ಮುಗಿಸಲಾಗಿತ್ತು. ಈಗ ಕೇವಲ ಕಲ್ಲಿನ ಗೂಡಷ್ಟೇ ಅದರ ಅವಶೇಷವಾಗಿ ಉಳಿದುಕೊಂಡಿದೆ.

ನೀಲA ಕಣಿವೆಯಲ್ಲಿರುವ ಈ ಮೂಲ ಶಾರದಾ ಪೀಠಕ್ಕೆ ಭಾರತದಿಂದ ಹೋಗುವ ಜನರು ಟೀಟ್ವಾಲ್ ಮೂಲಕ ಹೋಗುತ್ತಾರೆ. ಈ ಟೀಟ್ವಾಲ್‌ನಲ್ಲಿ ಕೂಡ ಒಂದು ಸಣ್ಣ ಶಾರದಾ ಮಂದಿರ ಮತ್ತು ಸಿಕ್ಖರ ಗುರುದ್ವಾರವಿತ್ತು. ಇಲ್ಲಿಂದಲೇ ಶಾರದಾ ಪೀಠದ ಯಾತ್ರೆ ಆರಂಭ . ಈ ಮಂದಿರ ಮತ್ತು ಗುರುದ್ವಾರವನ್ನು ಕೂಡ 1957ರಲ್ಲಿ ಕಬಾಯಿಲಿಗಳು ದಾಳಿ ಮಾಡಿ ನೆಲಸಮ ಗೊಳಿಸಿದರು.

ಸದ್ಯ ನರೇಂದ್ರ ಮೋದಿ ಸರಕಾರ ಟಿಟ್ವಾಲ್‌ನಲ್ಲಿರುವ ದ್ವಂಸಗೊAಡ ದೇವಾಲಯ ನಿರ್ಮಾಣಕ್ಕೆ ಕ್ರಮ ವಹಿಸಿ 2021ರಲ್ಲಿ ಭೂಮಿ ಪೂಜೆ ನಡೆಸಿತು. ಒಂದೇ ವರ್ಷದಲ್ಲಿ ಮಂದಿರ ಮತ್ತು ಗುರುದ್ವಾರ ನಿರ್ಮಾಣಗೊಂಡಿದೆ. ಈ ವರ್ಷ ಟೀಟ್ವಾಲ್ ಶಾರದಾ ಮಂದಿರ ಲೋಕಾರ್ಪಣೆಗೊಂಡಿತು. ಆದರೆ ಮೂಲ ಶಾರದಾ ಶಕ್ತಿ ಪೀಠ ಇನ್ನೂ ಪಾಕ್ ಕಬ್ಜೆಯಲ್ಲಿದೆ.

ಮೂರು ದಿನಗಳ ಹಿಂದೆ ಶಾರದಾ ಪೀಠ ಮತ್ತು ಗುರುದ್ವಾರವನ್ನು ಅಮಿತ್ ಶಾಹ್ ಅವರು ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡುತ್ತಾ ಪಾಕ್ ಆಕ್ರಮಿತ ಕಾಶ್ಮೀರದೊಳಗಿರುವ ಶಾರದಾಪೀಠವನ್ನು ಭಕ್ತರಿಗೆ ತೆರವಾಗಿಸಬೇಕು. ಅಲ್ಲೊಂದು ಸುಂದರ ಮಂದಿರ ಸಮುಚ್ಛಯ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತವಾಸಿಗಳಿಗೆ ಈ ಹೇಳಿಕೆ ಎಷ್ಟು ಮುಟ್ಟಿತ್ತೋ ಗೊತ್ತಿಲ್ಲ. ಆದರೆ ಪಾಕ್ ಆಕ್ರಮಿತ ಕಾಶ್ಮೀರದ ಅಸೆಂಬ್ಲಿಯೊಳಗೆ ಮಾತ್ರ ಅಮಿತ್ ಶಾಹ್ ಅವರ ಮಾತುಗಳು ಪ್ರತಿಧ್ವನಿಸಿವೆ. ಅಮಿತ್ ಶಾಹ್ ಅವರು ಪಾಕಿಸ್ಥಾನದ ಮುಂದೆ ಮನವಿ ಮಾಡಿಲ್ಲ. ಮಾತುಕತೆಗೂ ಮುಂದಾಗಿಲ್ಲ.

 

ಕೇವಲ ಹೀಗಾಗಬೇಕು ಎಂದು ಹೇಳಿಕೆ ನೀಡಿದ್ದೇ ತಡ ಪಾಕ್ ಆಕ್ರಮಿತ ಕಾಶ್ಮೀರದ ಅಸೆಂಬ್ಲಿ ಶಾರದಾ ಪೀಠವನ್ನು ಹಿಂದೂ ಯಾತ್ರಿಗಳಿಗೆ ಬಿಟ್ಟುಕೊಡಲು ತುದಿಗಾಲಲ್ಲಿ ನಿಂತಿದೆ. ಅಲ್ಲಿನ ಜನರು ಕರ್ತಾರ್‌ಪುರ ಕಾರಿಡಾರ್ ಭಾರತದ ಯಾತ್ರಿಗಳಿಗೆ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ. ಆಡಳಿತರೂಢ ಆವಾಮಿ ಮುಸ್ಲಿಂ ಲೀಗ್‌ನ ಶೇಕ್ ರಶೀದ್ ಎಂಬಾತ ಈ ಬಗ್ಗೆ ಸದನದಲ್ಲಿ ಪ್ರಸ್ತಾವನೆ ಮುಂದಿಡುತ್ತಿದ್ದAತೆ ಅಸೆಂಬ್ಲಿಯಲ್ಲಿರುವ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿಬಿಟ್ಟರು! ಅಷ್ಟಕ್ಕೂ ಚಾಣಾಕ್ಯ ಹೂಡಿರುವ ತಂತ್ರವಾದರೂ ಏನಿರಬಹುದು. ?

ಪಕ್ಕಾ ಹಿಂದೂ ವಿರೋಧಿಯಾಗಿರುವ ಶೇಕ್ ರಶೀದ್ ಈ ಹಿಂದೆ ಭಾರತಕ್ಕೆ ಬಾಂಬು ದಾಳಿ ಮಾಡುವ ಧಮಕಿ ಹಾಕುತ್ತಾ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದ ವ್ಯಕ್ತಿ. ಏಕಾಏಕಿ ಈತನ ವರಸೆ ಬದಲಾಗಲು ಕಾರಣವಿದೆ. ಇವನ ಎಎಮ್ ಎಲ್ ಪಕ್ಷ ಇಮ್ರಾನ್‌ಖಾನ್ ನೇತೃತ್ವದ ಪಾಕಿಸ್ಥಾನ್ ತೆಹ್ರೀಕ್ ಇನ್ಸಾಫ್ ಪಕ್ಷದ ಜೊತೆ ಸರಕಾರ ನಡೆಸುತ್ತಿತ್ತು. ಈತನ ಮತ್ತು ಇಮ್ರಾನ್ ಖಾನ್ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರದ ಜನರು ದಂಗೆ ಎದ್ದಿದ್ದಾರೆ. ಭಾರತದ ರಾ ಮೊದಲಾದ ರಹಸ್ಯ ಸಂಘಟನೆಗಳು ಇದರ ಹಿಂದೆ ದಿನ ರಾತ್ರಿ ಎನ್ನದೆ ದುಡಿಯುತ್ತಿವೆ. ಭಾರತದ ರಹಸ್ಯ ಸಂಸ್ಥೆಗಳು ಕಳೆದ ಐದಾರು ವರ್ಷಗಳಿಂದ ಪಾಕಿಸ್ಥಾನದ ಆಯಕಟ್ಟಿನ ಸ್ಥಳಗಳಲ್ಲಿ ಆಳಕ್ಕೆ ಬೇರು ಬಿಟ್ಟಿದ್ದು ಬಲವಾದ ಹಿಡಿತವನ್ನು ಹೊಂದಿವೆ. ಭಾರತದ ಒಂದು ಸಣ್ಣ ಇಶಾರೆಯೂ ಅಲ್ಲಿ ನಾಗರೀಕ ಯುದ್ಧವನ್ನೇ ಆರಂಭಿಸಿ ಬಿಡಬಹುದು.

ಒಂದು ಕಡೆ ಬಡತನ ಹಸಿವು ನಿರುದ್ಯೋಗ ಬ್ರಷ್ಟಾಚಾರಗಳಿಂದ ಪಾಕಿಸ್ಥಾನ ಸೋತು ಸುಣ್ಣವಾಗಿ ಹೋಗಿದೆ. ಆ ಹುಟ್ಟು ದರಿದ್ರರ ಬಳಿ ಈಗ ಚುನಾವಣೆ ನಡೆಸಲೂ ದುಡ್ಡಿಲ್ಲವಂತೆ! ಅದರಲ್ಲೂ ಸಿಂದ್, ಬಲೂಚ್ ಮತ್ತು ಕಾಶ್ಮೀರ ಭಾಗದಲ್ಲಿ ಜನರು ಪಶು ಸದೃಶ ಜೀವನ ನಡೆಸುತ್ತಿದ್ದಾರೆ. ಅಲ್ಲಿ ವಿದ್ಯುತ್, ನೀರು, ರಸ್ತೆ, ಆಹಾರ ಔಷದ, ವೈದ್ಯಕೀಯ ಸವಲತ್ತು ಒಂದೂ ಸಿಗುತ್ತಿಲ್ಲ. ಜನರ ಜೀವನ ನರಕಕ್ಕಿಂತ ಕಡೆಯಾಗಿದೆ. ಲಕ್ಷ ಲಕ್ಷ ಹಿಂದುಗಳ ನೆತ್ತರು ಹರಿಸಿ ಪಡೆದ ದಾರುಲ್ ಇಸ್ಲಾಮ್ ಈಗ ಅವರ ಪಾಲಿಗೆ ಕಾದ ಬಾಣಾಲೆಯಂತಾಗಿದೆ. ಬೇಯದೇ ಬೇರೆ ಉಪಾಯವಿಲ್ಲ. ಇತ್ತ ಭಾರತದ ಭಾಗವಾಗಿರುವ ಕಾಶ್ಮೀರದಲ್ಲಿ ಕಲಂ ೩೭೦ ರದ್ದುಗೊಂಡ ಬಳಿಕ ಪ್ರಚಂಡ ವೇಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೋದಿ ಸರಕಾರ ಯುದ್ಧೋಪಾದಿಯಲ್ಲಿ ದುಡಿಯುತ್ತಿದೆ.

ಆ ಕಣಿವೆ ನಾಡಿನ ಜನರು ವಿದ್ಯುತ್ ಬೆಳಕು ಕಂಡಿದ್ದೇ ಕಳೆದ ಒಂದು ವರ್ಷ ಹಿಂದೆ. ಪಾಕ್ ಆಕ್ರಮಿತ ಕಾಶ್ಮೀರದ ಜನರು ಗಡಿಯ ಈ ಭಾಗದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಈಗ ಅವರೊಳಗೆ ತಮ್ಮ ಆಡಳಿತ ವ್ಯವಸ್ಥೆಯ ಬಗ್ಗೆ ಅಸಾಧ್ಯ ಸಿಟ್ಟು ಮಡುಗಟ್ಟಿದೆ. ಅವರಿಗೆ ೯೦ ದಶಕದ ಬೆನಝೀರ್ ಬುಟ್ಟೋ ಭಾಷಣಗಳು ನೆನಪಾಗುತ್ತಿವೆ.

ಕಾಶ್ಮೀರಿಗಳು ಒಂದು ವಿಶೇಷ ಜನಾಂಗ ಅವರ ರೀತಿ ರಿವಾಜು ಆಹಾರ ವ್ಯವಹಾರ ಉಡುಗೆ ತೊಡುಗೆ ಎಲ್ಲವೂ ಭಿನ್ನ ಅವರು ಒಂದು ವಿಭಿನ್ನ ಜನಾಂಗ ಅವರನ್ನು ಭಾರತದ ಜೊತೆಗೆ ಸೇರುವಂತೆ ಒತ್ತಾಯ ಪಡಿಸುವುದು ತಪ್ಪು ಅವರಿಗೆ ಪ್ರತ್ಯೇಕ ರಾಜ್ಯ ನೀಡಬೇಕು ಎನ್ನುತ್ತಿದ್ದರು ಪಾಕ್ ನಾಯಕರು. ಈಗ ಪಾಕ್ ಆಕ್ರಮಿತ ಪ್ರದೇಶದ ಕಾಶ್ಮೀರಿಗಳು ಕೂಡ ಯೋಚಿಸುತ್ತಿದ್ದಾರೆ. ಒಂದು ವೇಳೆ ಭಾರತದ ವಶದಲ್ಲಿರುವ ಕಾಶ್ಮೀರದ ನಿವಾಸಿಗಳು ಅಷ್ಟೊಂದು ಅಪರೂಪದ ತಳಿಗಳಾಗಿದ್ದರೆ ನಾವೂ ಕೂಡ ಅದೇ ಜನಾಂಗದವರಲ್ಲವೇ ? ನಮಗ್ಯಾಕೆ ಪಾಕಿಸ್ಥಾನ ವಿಶೇಷ ಸ್ಥಾನಮಾನ ನೀಡುತ್ತಿಲ್ಲ.

ಭಾರತ ನೀಡಿದಂತೆ ಪಾಕಿಸ್ಥಾನ ನಮಗೂ ವಿಶೇಷ ಸವಲತ್ತು ನೀಡಬೇಕಿತ್ತಲ್ಲವೇ ? ವಿಶೇಷವೇನೂ ಬೇಡ ಕನಿಷ್ಟ ಬೇರೆ ಪ್ರದೇಶಕ್ಕೆ ಕೊಟ್ಟಷ್ಟು ಅನುದಾನವಾದರೂ ಕೊಡಬೇಕಲ್ಲವೇ ? ಅದನ್ನೂ ಪಾಕಿಸ್ಥಾನ ಕೊಡದೆ ನಮ್ಮನ್ನೇಕೆ ವಂಚಿಸುತ್ತಿದೆ ಎಂದು ಅವರು ಯೋಚಿಸತೊಡಗಿದ್ದಾರೆ. ಪಾಕಿಸ್ಥಾನಕ್ಕೆ ವಿದ್ಯುತ್ ಉತ್ಪಾದನೆಯಾಗುವುದು ಜೀಲಂ ಝೀಲಂ ಪವರ್ ಪ್ರಾಜೆಕ್ಟ್ ಮೂಲಕ. ಅದಿರುವುದು ಪಿ.ಒ.ಕೆಯಲ್ಲಿ. ಆದರೆ ಅಲ್ಲಿನ ಜನ ಮಾತ್ರ ಇಂದಿಗೂ ಲಾಟೀನು ಬೆಳಕಲ್ಲಿದ್ದಾರೆ. ಈ ಎಲ್ಲಾ ಕಾರಣದಿಂದ ಅವರ ಆಕ್ರೋಶ ಜ್ವಾಲಾಮುಖಿಯಾಗಿ ಸಿಡಿಯಲು ಸಿದ್ಧವಾಗಿದೆ.

ಭಾರತಕ್ಕೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಒಂದು ಸಣ್ಣ ಅವಕಾಶ ಸಿಕ್ಕಿದರೂ ಜನ ಸಂಘರ್ಷಕ್ಕೆ ಕ್ರಾಂತಿಯ ಕಿಡಿ ಹಚ್ಚಿ ಬಿಡುತ್ತದೆ.ಈ ಹಿಂದೆ ಕಾಶ್ಮೀರದಲ್ಲಿ ಪಾಕಿಸ್ಥಾನದ ಐಎಸ್‌ಐ ಏನೆಲ್ಲಾ ಕರಾಮತ್ತು ನಡೆಸಿತ್ತೋ ಅದೆಲ್ಲವನ್ನೂ ಭಾರತದ ಗುಪ್ತಚರ ಸಂಸ್ಥೆಗಳು ಪಿ.ಒ.ಕೆ ಒಳಗೆ ನಡೆಸಲು ಸಿದ್ಧತೆ ನಡೆಸಿವೆ. ಆ ಬೇಡಿ ತಿನ್ನುವ ದೇಶ ನಮ್ಮ ಯುವಕರ ಕೈಗೆ ಕಲ್ಲು ಕೊಟ್ಟು ನಮ್ಮ ಸೇನೆಗೆ ಹೊಡೆಸಬಹುದಾದರೆ ನಾವ್ಯಾಕೆ ಅದನ್ನೇ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಮಾಡಿಸಬಾರದು ? ಅಲ್ಲೂ ಆಝಾದಿಯ ಘೋಷಣೆಗಳನ್ನು ಮೊಳಗಿಸಬಹುದಲ್ಲವೇ ?

~​ಜೈ ಮಹಾಕಾಲ್ ​

 

 
 
 
 
 
 
 
 
 
 
 

Leave a Reply