ಪದವಿ ಕಾಲೇಜಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್‌- ವಿದ್ಯಾರ್ಥಿಗಳಲ್ಲಿ ಸಂಚಲನ

ಕೋಲ್ಕತಾ: ಪದವಿ ಕಾಲೇಜಿನ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್‌ ತಾರೆ ಸನ್ನಿ ಲಿಯೋನ್‌ ಹೆಸರು ಕಾಣಿಸಿಕೊಂಡು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದಂಗಾದ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಕೋಲ್ಕತಾ ಕಾಲೇಜಿನ ಪದವಿಪೂರ್ವ ತರಗತಿ ಮುಗಿಸಿ ಮೊದಲ ವರ್ಷದ ಬಿಎಗೆ (ಆನರ್ಸ್‌) ಅರ್ಹತೆ ಪಡೆದಿರುವ ವಿದ್ಯಾರ್ಥಿ ಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಸನ್ನಿ ಲಿಯೋನ್‌ ಹೆಸರು ದಾಖಲಾಗಿತ್ತು.

ಕೋಲ್ಕತಾದ ಅಶುತೋಷ್ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಬಿಎ (ಆನರ್ಸ್) ಪ್ರವೇಶಕ್ಕಾಗಿ ಕಾಲೇಜು ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿ ಸಿದ್ದ ಪಟ್ಟಿಯಲ್ಲಿ ಇವರ ಹೆಸರು ಮೊದಲಿಗೆ ಇದ್ದುದನ್ನು ಕಂಡ ವಿದ್ಯಾರ್ಥಿಗಳೂ ದಂಗಾಗಿ ಹೋಗಿದ್ದರು.

ಮಾತ್ರವಲ್ಲದೇ,ಟಾಪರ್‌ ಸ್ಥಾನದಲ್ಲಿದ್ದ ಸನ್ನಿ ಅಪ್ಲಿಕೇಶನ್ ಐಡಿ ಮತ್ತುರೋಲ್ ಸಂಖ್ಯೆ ಕೂಡ ಅದರಲ್ಲಿತ್ತು. ಜತೆಗೆ, 12 ನೇ ತರಗತಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ 400 ಅಥವಾ ಪೂರ್ಣ ಅಂಕಗಳನ್ನು ಪಟ್ಟಿಯಲ್ಲಿ ನಮೂದಿ ಸಲಾಗಿತ್ತು.

ಈ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ತಿಳಿಯುತ್ತಲೇ ಆ ಹೆಸರನ್ನು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಜತೆ ಮಾತನಾಡಿದ್ದೇವೆ. ಯಾರೋ ಕಿಡಿಗೇಡಿಗಳು ಸನ್ನಿ ಲಿಯೋನ‌ ಹೆಸರಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದಿರುವ ಆಡಳಿತ ಮಂಡಳಿ ಈ ಬಗ್ಗೆ ತನಿಖೆಗೆ ಆದೇಶಿ ಸಿದೆ.

Leave a Reply