ವಿಶ್ವದ ಎಲ್ಲೆಡೆ ಭಾರತದ ಯೋಗ ಪರಂಪರೆ ತಲುಪಿದೆ ~ಪ್ರಧಾನಿ ಮೋದಿ.

ಮೈಸೂರು : ಅಂತಾರಾಷ್ಟ್ರೀಯ ಯೋಗ ದಿನದವಿಶ್ವದ ಎಲ್ಲೆಡೆ ಭಾರತದ ಯೋಗ ಪರಂಪರೆ ತಲುಪಿದೆ ಎಂದ ಪ್ರಧಾನಿ ಮೋದಿ, ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಅರಮನೆ ಮೈದಾನದಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳ ಜೊತೆಗೆ ಯೋಗಾಭ್ಯಾಸ ಮಾಡಿದರು. ಯೋಗಾಭ್ಯಾಸ ಮಾಡಲು ಅನುಕೂಲವಾಗುವಂತೆ ಬಿಳಿ ಬಣ್ಣದ ಶರ್ಟ್‌, ಪೈಜಾಮಾ ಧರಿಸಿ ಆಗಮಿಸಿದ್ದ ಪ್ರಧಾನಿ ಮೋದಿ, ಸಾವಿರಾರು ಜನರ ನಡುವೆ ಕುಳಿತು ಯೋಗದ ವಿವಿಧ ಭಂಗಿಗಳನ್ನು ಅಭ್ಯಾಸ ಮಾಡಿದರು.

ಕೇಂದ್ರ ಸಚಿವ ಸರ್ಬಾನಂದ ಸೋನಾವಾಲಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಪ್ರಧಾನಿ ಮೋದಿ ಅವರ ಜೊತೆಗೆ ಯೋಗಾಭ್ಯಾಸ ಮಾಡಿದರು.

ಯೋಗಾಭ್ಯಾಸಕ್ಕೂ ಮುನ್ನ ಯೋಗ ಪಟುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಎಲ್ಲರಿಗೂ 8ನೇ ಅಂತಾರಾಷ್ಟ್ರೀಯ ಯೋಗ ದಿನದ ಶುಭ ಕೋರಿದರು. ಇಂದು ವಿಶ್ವದ ಎಲ್ಲೆಡೆ ಭಾರತದ ಯೋಗ ಪರಂಪರೆ ತಲುಪಿದೆ ಎಂದ ಪ್ರಧಾನಿ ಮೋದಿ, ಯೋಗಾಭ್ಯಾಸದಿಂದ ಶಾಂತಿ ಲಭಿಸುತ್ತದೆ ಎಂದು ತಿಳಿಸಿದರು. ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಯೋಗದಿಂದ ಶಾಂತಿ ಲಭಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

 

ಇಡೀ ವಿಶ್ವವೇ ನಮ್ಮ ದೇಹ ಹಾಗೂ ಮನಸ್ಸಿನಿಂದ ಆರಂಭವಾಗುತ್ತದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಇಡೀ ಜಗತ್ತು ಶುರುವಾಗೋದೇ ನಮ್ಮಿಂದ ಎಂದರು. ಯೋಗಾಭ್ಯಾಸದ ಮೂಲಕ ಎಲ್ಲವೂ ನಮ್ಮೊಳಗೇ ಇದೆ ಎಂಬ ಪ್ರಜ್ಞೆ ಮೂಡುತ್ತದೆ. ನಮ್ಮೊಳಗೇ ಜಾಗೃತಿ ಮೂಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಯೋಗಾಭ್ಯಾಸದಿಂದ ಕೋಟ್ಯಂತರ ಜನರು ಆಂತರಿಕ ಶಾಂತಿ ಪಡೆಯಬಹುದಾಗಿದ್ದು, ಈ ಮೂಲಕ ಜಾಗತಿಕ ಶಾಂತಿಯ ವಾತಾವರಣ ಮೂಡುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಯೋಗಾಭ್ಯಾಸವು ದೇಶ ದೇಶಗಳ ಸಂಪರ್ಕ ಕೊಂಡಿಯಾಗಿದೆ ಎಂದು ಅಭಿಪ್ರಾಯಪಟ್ಟ ಪ್ರಧಾನಿ ಮೋದಿ, ಯೋಗವು ನಮ್ಮೆಲ್ಲರ ಸಮಸ್ಯೆಗಳ ಪರಿಹಾರ ಮಾಡುವ ಶಕ್ತಿಯಾಗಿದೆ ಎಂದರು.

ಮೈಸೂರಿಗೆ ತನ್ನದೇ ಆದ ಹೆಗ್ಗಳಿಕೆ ಇದೆ ಎಂದು ಸಾಂಸ್ಕೃತಿಕ ನಗರಿಯಲ್ಲಿ ಹಾಡಿ ಹೊಗಳಿದ ಪ್ರಧಾನಿ ಮೋದಿ, ಮೈಸೂರಿನ ಸಾಂಸ್ಕೃತಿಕ, ಐತಿಹಾಸಿಕ ಪ್ರಾಮುಖ್ಯತೆಯನ್ನು ವರ್ಣಿಸಿದರು.

ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲ, ಆಧ್ಯಾತ್ಮಿಕ ರಾಜಧಾನಿ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಯೋಗವನ್ನ ಕೊಡುಗೆಯಾಗಿ ನೀಡಿದ ನಗರ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಯೋಗ ಭೂಮಿಯಾದ ಮೈಸೂರಿನ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಯೋಗಾಭ್ಯಾಸವನ್ನು ಪೋಷಿಸಿಕೊಂಡು ಬಂದಿದ್ದಾರೆ ಎಂದು ಹೊಗಳಿದರು. ಯೋಗ ದಿನಾಚರಣೆಯ ಈ ಸುದಿನದಂದು ಮೈಸೂರಿಗೆ ಪ್ರಣಾಮಗಳು ಎಂದು ಪ್ರಧಾನಿ ಮೋದಿ ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಸಿಎಂ ಬಸವರಾಜ ಬೊಮ್ಮಯಿ, ವಿಶ್ವ ಯೋಗ ದಿನಾಚರಣೆ ಆರಂಭಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ ಅಪಾರ ಎಂದರು. ಯೋಗದಿಂದ ಮನಸ್ಸು ಹಾಗೂ ದೇಹ ಒಂದಾಗುತ್ತೆ ಎಂದು ಅವರು ತಿಳಿಸಿದರು. ಮೈಸೂರಿನ ಅರಮನೆ ಮೈದಾನದ ಬಳಿ ಸೇರಿದ್ದ ಸಾವಿರಾರು ಜನರು ಪ್ರಧಾನಿ ಮೋದಿ ಅವರ ಜೊತೆಗೆ ಯೋಗಾಭ್ಯಾಸ ಮಾಡಿ 8ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಸಾರ್ಥಕಗೊಳಿಸಿದರು.

 
 
 
 
 
 
 
 
 
 
 

Leave a Reply