ಫೆಬ್ರವರಿ 25-27 ಉಡುಪಿಯಲ್ಲಿ ಮುರಾರಿಕೆದ್ಲಾಯ ರಂಗೋತ್ಸವ

ಉಡುಪಿ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.) ಸಂಸ್ಥೆಯ ಆಶ್ರಯದಲ್ಲಿ ಡಾ. ನಿ. ಮುರಾರಿ ಬಲ್ಲಾಳ್ ಪ್ರೊ. ಕೆ.ಎಸ್. ಕೆದ್ಲಾಯ ನೆನಪಿನ #ಮುರಾರಿಕೆದ್ಲಾಯರಂಗೋತ್ಸವವು ಫೆಬ್ರವರಿ 25,26,27 ಪ್ರತಿದಿನ ಸಂಜೆ ಗಂಟೆ 7.೦೦ಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿಲಿದೆ.

ತಾ. 25.02.2022 ಶುಕ್ರವಾರ ಸಂಜೆ ಗಂಟೆ 6.15ಕ್ಕೆ ರಂಗೋತ್ಸವದ ಉದ್ಘಾಟನೆಯನ್ನು ಖ್ಯಾತ ಯುವ ರಂಗ ನಿರ್ದೇಶಕರಾದ ಶ್ರೀ ಲಕ್ಷ್ಮಣ ಕೆ.ಪಿ. ನೆಲಮಂಗಲ ಇವರು ಮಾಡಲಿರುವರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಉಡುಪಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯ್ಕ್ ಮತ್ತು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಭಾಗವಹಿಸಲಿರುವರು. ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು. ಆ ನಂತರ ರಂಗಾಯಣ ಶಿವಮೊಗ್ಗ ಕಲಾವಿದರಿಂದ “ ವಿ ದ ಪೀಪಲ್ ಆಫ್ ಇಂಡಿಯಾ” (ರಚನೆ: ಡಾ. ರಾಜಪ್ಪ ದಳವಾಯಿ, ನಿರ್ದೇಶನ: ಲಕ್ಷ್ಮಣ ಕೆ.ಪಿ. ಸಹ ನಿರ್ದೇಶನ ಸಂಧ್ಯಾ ಅರಕೆರೆ) ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.

ತಾ. 26.02.2022 ಶನಿವಾರ ನಾಟ್ಯಶಿವ ಮೈಸೂರು ಕಲಾವಿದರಿಂದ “ಐ ಡ್ರೀಮ್ ಬಿಫೋರ್ ಐ ಟೇಕ್ ದಿ ಸ್ಟ್ಯಾಂಡ್” (ಮೂಲ: ಅರ್ಲೆನ್ ಹಟನ್, ಕನ್ನಡಕ್ಕೆ: ಪ್ರತಿಭಾ ನಂದ ಕುಮಾರ್, ಪರಿಕಲ್ಪನೆ/ ನಿರ್ದೇಶನ : ಸಾಲಿಯಾನ್ ಉಮೇಶ್ ನಾರಾಯಣ್) ಕನ್ನಡ ನಾಟಕ ಮತ್ತು ತಾ.27.02.2022 ಭಾನುವಾರ ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಆರ್ಟ್, ಕೇರಳ ಕಲಾವಿದರಿಂದ “ಬೊಲಿವಿಯನ್ ಸ್ಟಾರ‍್ಸ್” (ಮೂಲ ಕಥೆ: ಪಿ.ವಿ. ಶಾಜಿ ಕುಮಾರ್, ರಂಗ ರೂಪ /ವಿನ್ಯಾಸ/ ನಿರ್ದೇಶನ: ಅರುಣ್ ಲಾಲ್) ಮಲೆಯಾಳಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವರು.

 
 
 
 
 
 
 
 
 
 
 

Leave a Reply