ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಔಷಧೀಯ ಸಸ್ಯಗಳ ವಿತರಣೆ

ಮುನಿಯಾಲು ಆಯುರ್ವೇದ ಸಂಸ್ಥೆಯಲ್ಲಿ ವನಮಹೋತ್ಸವ ಸಪ್ತಾಹದ ಅಂಗವಾಗಿ ಆಸಕ್ತರಿಗೆ ಆಯ್ದ ಔಷಧೀಯ ಸಸ್ಯಗಳಾದ ಅಮೃತ ಬಳ್ಳಿ, ಹಿಪ್ಪಲಿ, ಅಂಟುವಾಳ, ಪುರ್ನಪುಳಿ, ನೇರಳೆ, ಬಿಲ್ವ ಮತ್ತು ಇತರ ಸಸ್ಯಗಳನ್ನು ದಿನಾಂಕ ೧೩.೦೭.೨೦೨೨ ರಂದು ಪೂರ್ವಾಹ್ನ ೯.೦೦ ರಿಂದ ಸಂಜೆ ೪ ಗಂಟೆಯವರೆಗೆ ಉಚಿತವಾಗಿ ವಿತರಿಸಲಾಯಿತು. ಪ್ರಾಂಶುಪಾಲರಾದ ಡಾ.ಸತ್ಯನಾರಾಯಣ ಬಿ.ಯವರು ಗಿಡ ವಿತರಿಸುವುದರ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ, ಹಾಗೂ ದ್ರವ್ಯಗುಣ ವಿಭಾಗದ ಡಾ.ಚಂದ್ರಕಾAತ್ ಭಟ್, ಡಾ.ಮೊಹಮ್ಮದ್ ಆತಿಕುರ್ ರೆಹಮನ್, ಡಾ.ಪ್ರಿಯಾ ಆರ್, ಡಾ.ಆರ್ಚನಾ ಕಲ್ಲೂರಾಯ, ಕಚೇರಿಯ ಅಧೀಕ್ಷಕರಾದ ಶ್ರೀ ಸುಪ್ರಸಾದ್ ಶೆಟ್ಟಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಮಾರು ೨೫೦೦ ಕ್ಕೂ ಹೆಚ್ಚು ಗಿಡಗಳನ್ನು ೩೦೦ಕ್ಕೂ ಅಧಿಕ ಸಾರ್ವಜನಿಕರಿಗೆ ವಿತರಿಸಲಾಯಿತು ಎಂದು ಸಂಸ್ಥೆಯ ಪತ್ರಿಕಾ ಪ್ರಕಟನೆ ತಿಳಿಸಿದೆ.

 
 
 
 
 
 
 
 
 
 
 

Leave a Reply