ಮೊಟ್ಟೆಗೆ ಉಡುಪಿ ಶಾಸಕ ರಘುಪತಿ ಭಟ್‌ ಬೆಂಬಲ

ಉಡುಪಿ: ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡಿದರೆ ತಪ್ಪಿಲ್ಲ ಎಂದು ಹೇಳುವುದರ ಮೂಲಕ ಸರಕಾರದ ಮಕ್ಕಳಿಗೆ ಮೊಟ್ಟೆ‌ ನೀಡುವ ಯೋಜನೆಗೆ ಉಡುಪಿ ಶಾಸಕ ರಘುಪತಿ ಭಟ್‌ ಬೆಂಬಲಿಸಿದ್ದಾರೆ.  ಕುರಿತು ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮೊಟ್ಟೆ ಕೊಟ್ಟ ಕೂಡಲೇ ಮೊಟ್ಟೆಯನ್ನು ತಿನ್ನಲೇಬೇಕು ಎಂದೆನಿಲ್ಲ ಆದ್ದರಿಂದ ಕೊಟ್ಟರೆ ತಪ್ಪು ಎಂದು ನನಗೆ ಅನಿಸುವುದಿಲ್ಲ.

ಸಣ್ಣ ಪ್ರಾಯದಲ್ಲಿ ಮಕ್ಕಳು ಸಸ್ಯಹಾರಿ ಇದ್ದರೆ ಸಸ್ಯಹಾರಿಯಾಗಿಯೇ ಇರುತ್ತಾರೆ.  ಬೆಳೆದು ದೊಡ್ಡವರಾದ‌ ಮೇಲೆ‌ ಅವರು ಬದಲಾಗುವುದು. ಮೊಟ್ಟೆಯನ್ನು ಕೊಡುವ ಸಂದರ್ಭದಲ್ಲಿ ಪ್ರತ್ಯೇಕವಾಗಿ ಕೊಡುವ ವ್ಯವಸ್ಥೆ ಮಾಡ ಬಹುದು. ಕೆಲವೊಮ್ಮೆ ಸಸ್ಯಹಾರಿ ಗಳಿಗೆ ಮೊಟ್ಟೆ ತಿನ್ನುವುದನ್ನು ನೋಡುವಾಗ ಬೇರೆ ತರನಾದ ಭಾವನೆಗಳು ಬರಬಹುದು ಆದ್ದರಿಂದ ಇದಕ್ಕೆ ಶಾಲೆಯಲ್ಲಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬಹುದು. 

ಯಾರೋ ವಿರೋಧಿಸುತ್ತಾರೆ ಎಂಬ ಕಾರಣಕ್ಕಾಗಿ‌ ಮೊಟ್ಟೆ‌‌ ಕೊಡದೇ ಇರುವುದು ಸೂಕ್ತವಾದ‌ ನಿರ್ದಾರವಲ್ಲ. ಇತರ ಮಕ್ಕಳು ಮೊಟ್ಟೆ ತಿನ್ನುವುದನ್ನು ನೋಡಿ ಮಕ್ಕಳು ಪ್ರಭಾವಿತರಾಗುವುದು ಇಲ್ಲ ಎಂದು ಅವರು ಹೇಳಿದರು.

 
 
 
 
 
 
 
 
 
 
 

Leave a Reply