ಅಂತರಾಷ್ಟ್ರೀಯ ಯೋಗ ದಿನಾಚರಣೆ: ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ.

ಮಿಲಾಗ್ರಿಸ್ ಕಾಲೇಜ್ ಕಲ್ಯಾಣಪುರ ದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಘಟಕದ ಸಹಯೋಗದೊಂದಿಗೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುನೈತ್ ಇಂಟರ್ನ್ಯಾಷನಲ್ ಪೌಂಡೇಶನ್ ನ ಕಾರ್ಯನಿರ್ವಾಹಕರಾದ ಶ್ರೀಯುತ ಮಂಜುನಾಥ್ ಪಾಟ್ಕರ್ ಇವರು ಯೋಗದ ಮಹತ್ವ ಉದ್ದೇಶವನ್ನು ತಿಳಿಸಿದರು .ಅದರ ಜೊತೆಗೆ ಧ್ಯಾನ ಮಾಡುವುದರಿಂದ ಮನಸ್ಸು, ಶರೀರ, ಆಲೋಚನೆ, ಸಂಯಮ ಆರೋಗ್ಯ ಹಾಗೂ ಯೋಗಕ್ಷೇಮ ದ ಕಡೆ ಯಾವ ರೀತಿ ನಮ್ಮ ಜೀವನವನ್ನು ಅತ್ಯಮೂಲ್ಯ ಗೊಳಿಸಬೇಕೆಂದು ಅರಿವು ಮೂಡಿಸಿ ತರಬೇತಿ ನೀಡಿದರು. ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ವಿನ್ಸೆಂಟ್ ಆಳ್ವ ಇವರು ಅಧ್ಯಕ್ಷೀಯ ಮಾತಿನೊಂದಿಗೆ ಧ್ಯಾನದ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾಕ್ಟರ್ ಜಯರಾಮ್ ಶೆಟ್ಟಿಗಾರ್ ,ಹಿಂದಿ ವಿಭಾಗದ ಮುಖ್ಯಸ್ಥೆ ಯಾದ ಶ್ರೀಮತಿ ಸೋಫಿಯಾ ಡಯಾಸ್, ಎನ್ಎಸ್ಎಸ್ ನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಎಂ ಜೋಗಿ ,ಮೆಲ್ಸನ್ ಡಿಸೋಜ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ,ಉಪನ್ಯಾಸಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಐಕ್ಯೂಎಸಿ ಸಂಯೋಜಕರಾದ ಡಾಕ್ಟರ್ ಜಯರಾಮ್ ಶೆಟ್ಟಿಗಾರ್ ನಿರ್ವಹಿಸಿ ಗೇಸ್ ಸ್ವಾಗತಿಸಿ ಸಹನಾ ಧನ್ಯವಾದಗೈದರು.

 
 
 
 
 
 
 
 
 
 
 

Leave a Reply