ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಉಂಗ್ರಪಳ್ಳಿ ದರ 40 ನೇ ವರ್ಷದ ವಾರ್ಷಿಕ ಉತ್ಸವ

ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಉಂಗ್ರಪಳ್ಳಿ ಗರಡಿ ಮನೆ ಮಟಪಾಡಿ ಬ್ರಹ್ಮಾವರ ಇದರ 40 ನೇ ವರ್ಷದ ವಾರ್ಷಿಕ ಉತ್ಸವ ಮತ್ತು 15 ನೇ ವರ್ಷದ ಪುನರ್‌ ಪ್ರತಿಷ್ಠೆಯ ವರ್ಧಂತ್ಯುತ್ಸವ ಪ್ರಯುಕ್ತ ಶ್ರೀ ದೇವಿಯ ಬ್ರಹ್ಮ ಕಲಶಾಭಿಷೇಕಚಂಡಿಕಾ ಹೋಮ ಮತ್ತು ಅನ್ನ ಸಂತರ್ಪಣೆ ಹಾಗೂ ಬ್ರಹ್ಮಮಂಡಲ(ಡಕ್ಕೆ ಬಲಿ)ಸೇವೆಯು ನಡೆಯಿತು.
ಬೆಳಿಗ್ಗೆ ಶ್ರೀದೇವಿಯ ಸನ್ನಿಧಾನದಲ್ಲಿ ಚಂಡಿಕಾ ಹೋಮ ನಡೆದ ಬಳಿಕ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ಜರುಗಿತು. ಸಂಜೆ ಸರ್ವ ಭಕ್ತರ ಸಹಕಾರದೊಂದಿಗೆ ಸಾಮೂಹಿಕ ಹೂವಿನ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾ ಮಹಿಳಾ ಮಂಡಳಿ ಮಟಪಾಡಿ ಇವರಿಂದ ಲಲಿತಾ ಸಹಸ್ರನಾಮ ಸ್ತ್ರೋತ್ರ ಪಠಣ ಹಾಗೂ ಶ್ರೀ ರಾಮಚಂದ್ರ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ಜರುಗಿತು. ಬಳಿಕ ಶ್ರಿ ಚಂಡಿಕಾದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಟಪಾಡಿ ಮತ್ತು ಬಾರ್ಕೂರು ಇವರಿಂದ ಕುಣಿತ ಭಜನೆ ಜರುಗಿತು.

ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಅಂಗವಾಗಿ ನಾಗಬ್ರಹ್ಮ ಸ್ಥಾನದಲ್ಲಿ ಹಾಲಿಟ್ಟು ಸೇವೆ, ದೇವಿಯ ಸನ್ನಿಧಾನದಲ್ಲಿ ಬ್ರಹ್ಮಮಂಡಲ ಡಕ್ಕೆ ಬಲಿಯ ಸೇವೆಯು ಸಂಪನ್ನಗೊಂಡಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಕ್ಷೇತ್ರ ನೀಲಾವರ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು. ಈ ಕಾರ್ಯಕ್ರಮದಲ್ಲಿ ಊರ ಪರವೂರಿನ ನೂರಾರು ಭಕ್ತಾದಿಗಳು ಭಾಗವಹಿಸಿ ದೇವರ ಅನುಗ್ರಹ ಪಡೆದುಕೊಂಡರು.

 
 
 
 
 
 
 
 
 
 
 

Leave a Reply