ನ್ಯಾಷನಲ್ ವಿಮೆನ್ಸ್ ಫ್ರಂಟ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ.

ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಉಡುಪಿ ಘಟಕದ ವತಿಯಿಂದ “ಮಹಿಳಾ ಸುರಕ್ಷತೆ ಕೇವಲ ಘೋಷಣೆಯಲ್ಲ ಅದು ಘನತೆಯ ಹಕ್ಕು” ಎಂಬ ಘೋಷಣೆಯೊಂದಿಗೆ ಉಡುಪಿಯ ಲಯನ್ಸ್ ಭವನದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು N W F ರಾಜ್ಯ ಸಮಿತಿ ಸದಸ್ಯರಾದ ನಸೀಮಾ ಫಾತಿಮಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಗುರುಕುಲ್ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇದರ ಸಂಯೋಜಕರಾದ ವೈಶಾಲ ಶೆಟ್ಟಿ, M E T ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರು ಹಾಗೂ ನಿರ್ವಾಹಕರಾಗಿರುವ Dr ಜುಲೈದ ಸುಲ್ತಾನ, ಥೀಮ್ಸ್ ಬಾಟಿಕ್ಯು ಸಂಘಟನೆಯ ಸ್ಥಾಪಕರಾದ ರೇಷ್ಮಾ ಸೈಯದ್, ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಕೆಮ್ಮನ್ನು ಇದರ ಪ್ರಾಂಶುಪಾಲರಾದ ಸಿಲ್ವಿಯನ್ A.C,
N W F ಕರ್ನಾಟಕ ರಾಜ್ಯ ಉಪಾಧ್ಯಕ್ಷೆಯಾದ ಸೈದಾ ಯೂಸುಫ್, ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಕಾರ್ಯದರ್ಶಿ ನಿದಾ ಆಫ್ರ ಬಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು.
N W F ಉಡುಪಿ ಜಿಲ್ಲಾಧ್ಯಕ್ಷೆ ರಹ್ಮತುನ್ನಿಸ ಸ್ವಾಗತಿಸಿ ಸಮ್ರಾನ ವಂದಿಸಿದರು.

 
 
 
 
 
 
 
 
 
 
 

Leave a Reply