ನೂತನ ಮಾಣಿಕ್ಯ ಹೆಸರಿನ ಒಕ್ಕೂಟ ರಚನೆ

ಉಡುಪಿ, ನವೆಂಬರ್ 25 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಡುಪಿ ಮತ್ತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ 35ನೇ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟ ರಚನೆ ಸಭೆಯು ಬುಧವಾರ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಿಡಂಬೂರು ಯುವಕ ಮಂಡಲ (ರಿ) ಕಡೆಕಾರು ಸ್ಮಾರಕ ರಂಗ ಮಂಟಪದಲ್ಲಿ ಜರುಗಿತು. 

ಸಂಜೀವಿನಿ ಯೋಜನೆಯಡಿ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ಮಾಣಿಕ್ಯ ಹೆಸರಿನ
ಒಕ್ಕೂಟ ರಚನೆ ಮಾಡಲಾಯಿತು. ನೂತನ ಒಕ್ಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ದಿನಕರ ಬಾಬು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ಈ ಒಕ್ಕೂಟವು ಜಿಲ್ಲೆಯಲ್ಲಿ ಮಾದರಿಯಾಗಿ ಮೂಡಿಬರಲಿ ಸದಸ್ಯರೆಲ್ಲರೂ ಸ್ವಾವಲಂಬಿಗಳಾಗಲಿ ಎಂದು ಶುಭ ಹಾರೈಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಗುರುದತ್, ಗ್ರಾಮ ಪಂಚಾಯತ್ ಆಡಳಿತಾಧಿಕಾರಿ
ಸಂದೀಪ್ ಶೆಟ್ಟಿ, ಯೋಜನಾ ಸಮನ್ವಯಾಧಿಕಾರಿ ಪಾಂಡುರAಗ ಕೆ., ಕು. ಸುಮ ಯುವ ವೃತ್ತಿಪರರು ಜಿಲ್ಲಾ
ಪಂಚಾಯತ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ಧೇಶ್,

 
 
 
 
 
 
 
 
 
 
 

Leave a Reply