ಡಿಸೆಂಬರ್ 1ರಿಂದ ಎಲ್ ಪಿಜಿ ಸಿಲಿಂಡರ್  ನಲ್ಲಿ ಹಲವಾರು ಬದಲಾವಣೆ 

ಡಿಸೆಂಬರ್ 1ರಿಂದ ಎಲ್ ಪಿಜಿ ಸಿಲಿಂಡರ್ ದರದಿಂದ ಹೊಸ ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸಿಸ್ಟಮ್ (ಆರ್ ಟಿಜಿಎಸ್) ಸಮಯ ಬದಲಾವಣೆ ಸೇರಿದಂತೆ, ಸಾಮಾನ್ಯ ನಾಗರಿಕರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಬಲ್ಲಂತಹ ವಿಷಯಗಳನ್ನ ಡಿಸೆಂಬರ್ 1 ರಿಂದ ಬದಲಾಯಿಸಲಾಗುವುದು.

ಈ ಮಾರ್ಗ ಸೂಚಿಗಳು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಇವುಗಳನ್ನ ನೆನಪಿಟ್ಟು ಕೊಳ್ಳುವುದು ಅತ್ಯಗತ್ಯ. ಅದರಂತೆ ಡಿಸೆಂಬರ್ 1ರಿಂದ ಬದಲಾಗುವ ಕೆಲವು ನಿಯಮಗಳು ಇಲ್ಲಿವೆ.

(RTGS) ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸಿಸ್ಟಂ : 2020ರ ಅಕ್ಟೋಬರ್ʼನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, 2020ರ ಡಿಸೆಂಬರ್ʼನಿಂದ ದೊಡ್ಡ ಮೊತ್ತದ ವಹಿವಾಟಿಗೆ ಬಳಸಲಾಗುವ ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸ್ಕೀಮ್ (ಆರ್ ಟಿಜಿಎಸ್) ದಿನದ 24 ಗಂಟೆಯೂ ಲಭ್ಯವಾಗಲಿದೆ ಎಂದು ಘೋಷಿಸಿತ್ತು. ಪ್ರಸ್ತುತ, ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರಗಳನ್ನ ಹೊರತುಪಡಿಸಿ, ವಾರದ ಎಲ್ಲಾ ಕೆಲಸದ ದಿನಗಳಲ್ಲಿ ಬಳಕೆದಾರರಿಗೆ RTGS ತೆರೆದಿರುತ್ತೆ.

ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ದ್ವೈಮಾಸಿಕ ಆರ್ ಬಿಐ ಹಣಕಾಸು ನೀತಿ ಪ್ರಕಟಣೆಯನ್ನ ಖಚಿತಪಡಿಸಿದ್ದು, ಗ್ರಾಹಕರಿಗೆ ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ (ಆರ್ ಟಿಜಿಎಸ್) ಸಿಸ್ಟಮ್ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.

ಅಂದ್ಹಾಗೆ, RTGS ಎಂಬುದು ಹಣಕಾಸಿನ ವಹಿವಾಟಿನ ಒಂದು ವಿಧಾನವಾಗಿದ್ದು, ಅಲ್ಲಿ ಹಣ ವರ್ಗಾವಣೆಗಳನ್ನ ನಿರಂತರವಾಗಿ ಮತ್ತು ನೈಜ ಸಮಯದಲ್ಲಿ, ವೈಯಕ್ತಿಕವಾಗಿ, ಒಂದು ವ್ಯವಹಾರ-ವಹಿವಾಟಿನ ಚೌಕಟ್ಟಿನ ಮೇಲೆ ಸ್ಥಿರಗೊಳಿಸಲಾಗುತ್ತದೆ. RTGS ಮೂಲಕ ವಹಿವಾಟುಗಳು ಅಥವಾ ವರ್ಗಾವಣೆಗಳು ಗರಿಷ್ಠ ಮೊತ್ತದ ಮಿತಿಯನ್ನ ಹೊಂದಿರುವುದಿಲ್ಲ.

ಎಲ್ ಪಿಜಿ ಸಿಲಿಂಡರ್ ಬೆಲೆ: ಪ್ರತಿ ತಿಂಗಳ ಮೊದಲ ದಿನ, ತೈಲ ಮಾರುಕಟ್ಟೆ ಸಂಸ್ಥೆಗಳು ವಿದೇಶಿ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆಗಳನ್ನ ಆಧರಿಸಿ ಎಲ್ ಪಿಜಿ ದರಗಳನ್ನ ಹೊಂದುತ್ವೆ. ಎಲ್ ಪಿಜಿ ಸಿಲಿಂಡರ್ ದರ ಬದಲಾವಣೆ ಕುರಿತು OMCಗಳು ಘೋಷಣೆ ಮಾಡುವ ನಿರೀಕ್ಷೆ ಇದೆ.

 
 
 
 
 
 
 
 
 
 
 

Leave a Reply