ವಿಗ್ ಧರಿಸಿದ ವರ: ಮದುವೆ ನಿರಾಕರಿಸಿದವಧು

ಲಕ್ನೊ: ಉತ್ತರಪ್ರದೇಶದ ಇಟವಾ ಜಿಲ್ಲೆಯ ಭರ್ತನಾ ಎಂಬಲ್ಲಿ ಈ ಪ್ರಕರಣ ವರದಿಯಾಗಿದೆ.

ವರ ಅಜಯ್ ಮದುವೆ ವೇಳೆ ತಮ್ಮ ತಲೆ ಬಗ್ಗೆ ಹೆಚ್ಚು ಜಾಗರೂಕರಾಗಿದ್ದರಂತೆ.ಸಾಂಪ್ರದಾಯಿಕ ಶಿರಸ್ತ್ರಾಣವನ್ನು ಪದೇ ಪದೇ ಸರಿಪಡಿಸುತ್ತಿದ್ದರಂತೆ.

ಇದರಿಂದ ವಧುವಿನ ಸಂಬಂಧಿಕರೊಬ್ಬರಿಗೆ ಸಂಶಯ ಮೂಡಿತ್ತು .

ಈ ಮಾತು ವಧುವಿನ ಕಿವಿಗೆ ಕೂಡ ಬಿತ್ತು. ಕೊನೆಗೆ ಅದು ಸತ್ಯವಾಗಿತ್ತು.

ವರ ವಿಗ್ ಧರಿಸಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ.

ಇದರಿಂದ ಆಘಾತಕ್ಕೆ ಒಳಗಾದ ವಧು ಅಲ್ಲಿ ಕುಸಿದು ಬಿದ್ದರು. ಬಳಿಕ ಚೇತರಿಸಿಕೊಂಡರೂ ಮದುವೆಗೆ ಒಪ್ಪಿಗೆ ಸೂಚಿಸಲಿಲ್ಲ.

ಮದುವೆ ಬೇಡವೇ ಬೇಡ ಎಂದು ಹಠ ಹಿಡಿದರು. ಅಂತಿಮವಾಗಿ ಹಾರ ಬದಲಾಯಿಸುವ ಮುನ್ನವೇ ಮದುವೆ ರದ್ದಾಯಿತು.

 
 
 
 
 
 
 
 
 
 
 

Leave a Reply