ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ವತಿಯಿಂದ “ಕಂಡದ ಪುಡೆತಂಚಿ ಆಟಿದ ಕೂಟ ಕೆಸರುದ ಗೊಬ್ಬುಲು”

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ವತಿಯಿಂದ ಕುಕ್ಕೆಹಳ್ಳಿ ಜಡ್ಡಿನ ಮನೆಯ ಕಣ್ಮನ ತಣಿಸುವ ಬೈಲಿನಲ್ಲಿ “ಕಂಡದ ಪುಡೆತಂಚಿ ಆಟಿದ ಕೂಟ ಕೆಸರುದ ಗೊಬ್ಬುಲು” ಕಾರ್ಯಕ್ರಮ ಆ.8 ರಂದು ಅದ್ಧೂರಿಯಾಗಿ ನಡೆಯಿತು.

ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ವಿಶ್ವನಾಥ್ ಶೆಟ್ಟಿ ಕೆಸರುಗದ್ದೆಗೆ ಹಾಲನೆರೆದು ಬತ್ತದ ಕಳಸಕ್ಕೆ ಬತ್ತ ಎರೆಯುವ ಮೂಲಕ ಆಟಿದ ಕೂಟ ಉದ್ಘಾಟಿಸಿದರು. ಜಿಲ್ಲಾ ಗವರ್ನರ್ ಮತ್ತು ಮಾಜಿ ಜಿಲ್ಲಾ ಗವರ್ನರ್ ಲಯನ್ ಜಯಕರ ಶೆಟ್ಟಿ ಇಂದ್ರಾಳಿ ಚೆನ್ನೆಮಣೆ ಆಡುವ ಮೂಲಕ ಆಟಿದ ಗೊಬ್ಬುಲು ಉದ್ಘಾಟನೆಗೊಂಡಿತು.

ಉಡುಪಿ ಹೆಣ್ಣುಮಕ್ಕಳ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಡಾ.ಯಾದವ್ ಕರ್ಕೇರ ತುಳುನಾಡಿನ ಮಣ್ಣಿನ ಮಹತ್ವವನ್ನು ಆಟಿ ತಿಂಗಳ ವಿಶೇಷತೆಯನ್ನು ಆಟಿ ಅಮಾವಾಸ್ಯೆಯ ಆಚರಣೆಗಳನ್ನು ತಿಳಿಸಿ ಮಾತನಾಡಿದರು.

ಕುಕ್ಕೆಹಳ್ಳಿ ಜಡ್ಡಿನ ಮನೆಯ ಹಿರಿಯರು, ಕೃಷಿಕ 95 ವರ್ಷ ಪ್ರಾಯದ ಚಂದಮ್ಮ ಹೆಗ್ಗಡ್ತಿಯವರನ್ನು ಸನ್ಮಾನಿಸಲಾಯಿತು. ಕಳೆದ ನಲವತ್ತು ವರ್ಷಗಳಿಂದ ಕೃಷಿಯನ್ನು ಜೀವನಾಧಾರವಾಗಿ ಇಟ್ಟುಕೊಂಡು ಪ್ರಗತಿಪರ ಕೃಷಿಕರಾಗಿ ಗುರುತಿಸಲ್ಪಡುವ ಸಮಾಜ ಸೇವಕ ಗುಣಕರ ಹೆಗಡೆಯನ್ನು ಅಭಿನಂದಿಸಲಾಯಿತು.

ಕಳೆದ 45-50 ವರ್ಷಗಳಿಂದ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸರಸು, ಸುಶೀಲಾ, ಅಕ್ಕಿ, ಗುಲಾಬಿಗೆ ಶಾಲು ಹೊದಿಸಿ ಗೌರವಿಸಲಾಯಿತು. 

ಕೃಷಿ ಉಪಕರಣಗಳು, ಮತ್ತು ಹಳ್ಳಿಯಲ್ಲಿ ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳನ್ನು ಇರಿಸಿ, ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ, ಆ ಮೂಲಕ ಅವುಗಳ ಪರಿಚಯ ಮತ್ತು ಮಹತ್ವವನ್ನು ತಿಳಿಸಲಾಯಿತು ಮತ್ತು ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡಿಸಲಾಯಿತು.

ಮಧ್ಯಾಹ್ನ ಬಾಯಲ್ಲಿ ನೀರೂರಿಸುವ ಖಾದ್ಯಗಳಾದ ಪೋಡಿ, ಕಬಾಬ್, ಪದಂಗಿ ಜ್ಯೂಸ್, ಹುರುಳಿ ಸಾರು, ಕಲ್ತಪ್ಪ, ತೋಜಂಕ್ ಪೆತ್ತರಿ ಉಪ್ಕರಿ, ತಿಮರೆ ಚಟ್ನಿ, ಉಪ್ಪಿನಲ್ಲಿ ಹಾಕಿದ ಮಾವಿನ ಚಟ್ನಿ, ಒಣ ಮೀನು ಚಟ್ನಿ, ಉಪ್ಪಡ್ ಪಚ್ಚಿರ್, ಕಾಡು ಕಂಚಲ ಫ್ರೈ, ನೀರ್ದೋಸೆ, ಕಪ್ಪ ರೊಟ್ಟಿ, ಊರುಕೊಳಿ ಸುಕ್ಕ, ಕಡಲೆ ಹೆಸರು ಘಸಿ, ಅನ್ನ ಹುರುಳಿ ಸಾರು, ಬಂಗುಡೆ ಪುಳಿ ಮುಂಚಿ, ಸೌತೆ ಕೊಡೇಕೆನ, ಅಕ್ಕಿ ಉಂಡೆ, ಪತ್ರೊಡೆ, ಪದಂಗಿ ಪಾಯಸ, ಹಲಸಿನ ಪಾಯಸ, ಸೊಳ್ಕಾಡಿ, ಮೊಸರು, ಉಪ್ಪಿನ ಕಾಯಿ, ಹುರುಳಿ ಚಟ್ನಿ ಯೊಂದಿಗೆ ತಮ್ಮನದ ಊಟ ಸವಿಯಲಾಯಿತು.

ಕೆಸರುಗದ್ದೆಯಲ್ಲಿ ವಾಲಿಬಾಲ್, ಹಗ್ಗಜಗ್ಗಾಟ, ಮಾನವ ಪಿರಮಿಡ್ ಮೂಲಕ ನಿಧಿ ತೆಗೆಯುವುದು, ಸೋಗೆ ಓಟ ಮುಂತಾದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. 

ಕಾರ್ಯಕ್ರಮದಲ್ಲಿ ಕ್ಯಾಬಿನೆಟ್ ಸೆಕ್ರೆಟರಿ ಸಪ್ನ ಸುರೇಶ್, ಕ್ಯಾಬಿನೆಟ್ ಕೋಶಾಧಿಕಾರಿ ಜಯಪ್ರಕಾಶ್, ಡಿಸ್ಟ್ರಿಕ್ಟ್ ಪಿ.ಆರ್.ಒ ಸಿದ್ದರಾಜು, ನಿವೃತ್ತ ಶಿಕ್ಷಕ ಪುತ್ತೂರು ಮಾಧವ ಶೆಟ್ಟಿ, ವಲಯಾಧ್ಯಕ್ಷ ಹೃಷಿಕೇಶ್ ಹೆಗ್ಡೆ, ಕ್ಲಬ್ಬಿನ ಕೋಶಾಧಿಕಾರಿ ಬುಡ್ನಾರ್ ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಶೇಖರ್ ರಾವ್ ವಂದಿಸಿದರು. ಸತೀಶ್ ಶೆಟ್ಟಿ ತೋನ್ಸೆ ಮತ್ತು ಪ್ರೇಮ್ ಕುಮಾರ್ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply