ಕುಷ್ಟರೋಗ ತಡೆ ವಿಶೇಷ ಕಾಯಾ೯ಗಾರ

ಉಡುಪಿ :- ಕುಷ್ಟರೋಗ ಮತ್ತು ಕ್ಷಯರೋಗ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದು ಹೊಡೆ ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ಪ್ರಿಮಾ ತಿಳಿಸಿದರು. ಅವರು ಫೆ.24ರಂದು ಹೊಡೆ ಸಾಲಿಯತ್ ಶಿಕ್ಷಣ ಸಂಸ್ಥೆಯಲ್ಲಿ ಆರೋಗ್ಯ ಇಲಾಖೆ ಮತ್ತು ಜೇಸಿಐ ಉಡುಪಿ ಸಿಟಿ ವತಿಯಿಂದ ನಡೆದ ಕುಷ್ಠ ರೋಗ ನಿವಾರಣಾ ಕಾಯಾ೯ಗಾರದಲ್ಲಿ ಮಾತನಾಡಿದರು. ನಮ್ಮ ಮೈಮೇಲೆ ಯಾವುದೇ ರೀತಿಯ ಚಮ೯ ರೋಗದ ಚಿಹ್ನೆಗಳು ಕುಷ್ಠ ರೋಗಕ್ಕೆ ಎಡೆಮಾಡಬಹುದು ಹೀಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕು ಎಂದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಖ್ಯಾತ ವೈದ್ಯರಾದ ಡಾII ವಿಜಯ್ ನೆಗಳೂರು ವಹಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ವಲಯ ನಿದೇ೯ಶಕ ರಾಘವೇಂದ್ರ ಪ್ರಭು,ಕವಾ೯ಲು, ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾo ಸಾಲಿಕೇರಿ, ಪ್ರಾಂಶುಪಾಲೆ ದೀಪಾ ಪೈ, ಡಾII ಚಿತ್ರಾ ನೆಗಳೂರು ಮುಂತಾದವರಿದ್ದರು. ಈ ಸಂದಭ೯ದಲ್ಲಿ ವಿದ್ಯಾಥಿ೯ಗಳೊಂದಿಗೆ ವಿಚಾರ ವಿನಿಮಯ ನಡೆಯಿತು.

 
 
 
 
 
 
 
 
 
 
 

Leave a Reply