ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿಯ ಅಂತಿಮ ಸುತ್ತಿಗೆ ಹತ್ತು ಕವಿಗಳ ಕೃತಿಗಳು ಆಯ್ಕೆ

ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ  ಕವಿ ದಿವಂಗತ ಕುರಾಡಿ ಸೀತಾರಾಮ ಅಡಿಗರ ನೆನಪಿನ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ( ರಿ) ಉಡುಪಿ  ಸಂಸ್ಥೆಯು  2023ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನವನ್ನು ಆಹ್ವಾನಿಸಿತ್ತು.

ಅಂತಿಮ ಸುತ್ತಿಗೆ ಹತ್ತು ಕೃತಿಗಳ ಕೃತಿಗಾರರಾದ  ಸುಮಿತ್ ಮೇತ್ರಿಯವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’,  ಡಾ. ಎಸ್.ಕೆ. ಮಂಜುನಾಥ್ ಅವರ ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’,  ಜಯಶ್ರೀ ಬಿ. ಕದ್ರಿ ಅವರ ‘ ಕೇಳಿಸದ ಸದ್ದುಗಳು’, ಗೋಪಾಲ ತ್ರಾಸಿ ಅವರ ‘ಚಿತ್ರ ಚೌಕಟ್ಟಿನಾಚೆ’, ಸಂತೋಷ ನಾಯಿಕ, ಬೆಳಗಾವಿ ಅವರ ‘ಹೊಸ ವಿಳಾಸದ ಹೆಜ್ಜೆಗಳು’, ಭಾಗ್ಯಜ್ಯೋತಿ ಹಿರೇಮಠ, ಗುಡಿಗೇರಿ ಇವರ ‘ಬಿದಿರ ಬಿನ್ನಹ’, ಎ.ಎನ್.ರಮೇಶ್. ಗುಬ್ಬಿ ಅವರ ‘ಆತ್ಮಾನು ಸಂಧಾನ’, ಪ್ರೊ. ಅಕ್ಷಯ ಆರ್. ಶೆಟ್ಟಿ ಅವರ  ‘ಹಿಡಿ ಅಕ್ಕಿಯ ಧ್ಯಾನ’, ಶಂಕರ್ ಸಿಹಿಮೊಗ್ಗೆ ಇವರ “ಇರುವೆ ಮತ್ತು ಗೋಡೆ”, ಅನಂತ ಕುಣಿಗಲ್
ಅವರ ‘ಖೈದಿಯ ಗೋಡೆ’ ಆಯ್ಕೆಯಾಗಿರುತ್ತದೆ.

ಅಂತಿಮವಾಗಿ ಈ ಪ್ರಶಸ್ತಿಗೆ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಪ್ರಶಸ್ತಿಯು ರೂಪಾಯಿ 10,000 ಗೌರವ ಧನದೊಂದಿಗೆ ಪ್ರಶಸ್ತಿಪತ್ರ ಹಾಗೂ ಫಲಕವನ್ನು ಒಳಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗುವುದು ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply