ಕುಕ್ಕೆಹಳ್ಳಿಯಲ್ಲಿ ಸರಕಾರಿ ಜಮೀನು ಅತಿಕ್ರಮಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಅಪರ ಜಿಲ್ಲಾಧಿಕಾರಿ

ಉಡುಪಿ : ತಾಲೂಕು ಕುಕ್ಕೆಹಳ್ಳಿ ಗ್ರಾಮಕ್ಕೆ ಕೋವಿಡ್-19 ಸಂಬಂಧ ಇತ್ತಿಚೆಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಹಶೀಲ್ದಾರರೊಂದಿಗೆ ಭೇಟಿ ನೀಡಿದರು.

ಈ ವೇಳೆ ಗ್ರಾಮ ಪಂಚಾಯತಿ ಮತ್ತು ಗ್ರಾಮಕರಣಿಕರ ಕಛೇರಿಯ ಪಕ್ಕದಲ್ಲಿ , ಉಡುಪಿ ಕೊಳಲಗಿರಿ- ಪರ್ಡೂರು ಪಿಡಬ್ಲ್ಯೂಡಿ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಕ್ಕೆ ಸೇರಿದ ಜಮೀನಿನ ಸರ್ವೆ ನಂಬ್ರ 127 ರಲ್ಲಿ ಅನಧಿಕೃತ ಅತಿಕ್ರಮಣವಾಗಿರುವುದನ್ನು ಗಮನಿಸಿದ್ದಾರೆ. ಸರ್ಕಾರಿ ಜಮೀನು ಅತಿಕ್ರಮಿಸಿ ಅದರಲ್ಲಿರುವ ಬೆಲೆಬಾಳುವ ಮರಮಟ್ಟುಗಳನ್ನು ನಲಸಮ ಮಾಡಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಕಬಳಿಸಿರುವುದು ಕಂಡು ಬಂದಿರುತ್ತದೆ.`ಕೋವಿಡ್-19 ಸಂದರ್ಭದಲ್ಲಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರಿ ಜಮೀನನ್ನು ಅತಿಕ್ರಮಿಸುವ ಕ್ರಮವು ಕಾನೂನುಬಾಹಿರವಾಗಿದ್ದು, ಸ್ಥಳದಲ್ಲಿದ್ದ ಅಪರ ಜಿಲ್ಲಾಧಿಕಾರಿ ಅತಿಕ್ರಮಣವನ್ನು ತೆರವುಗೊಳಿಸಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ತಹಶೀಲ್ದಾರ್ ಮತ್ತು ಗ್ರಾಮಕರಣಿಕರಿಗೆ ನಿರ್ದೇಶಿಸಿದರು.

ನಂತರ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹೋಂ ಕ್ಯಾರಂಟೈನ್, ಸೀಲ್ ಡೌನ್ ಮತ್ತು ಕೋವಿಡ್-19 ರ ಕುರಿತಾದ ಕ್ರಮಗಳ ಬಗ್ಗೆ ಸಭೆ ನಡೆಸಿ ಸಲಹೆ, ಸೂಚನೆ ನೀಡಿದರು.

 
 
 
 
 
 
 
 
 
 
 

Leave a Reply