18 ವರ್ಷ ಮೇಲ್ಪಟ್ಟವರಿಗೆ ಜೂನ್ 21 ರಿಂದ ಉಚಿತ ಲಸಿಕೆ – ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರಸಂಜೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ 19 ಸೋಂಕು ತಡೆಗಟ್ಟಲು ಹಂತ, ಹಂತವಾಗಿ ಲಾಕ್ ಡೌನ್ ಸೇರಿದಂತೆ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿದ್ದವು. ದೇಶದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಕೂಡಾ ಕಡಿಮೆಯಾಗಿದ್ದು, ಸಕ್ರಿಯ ಕೋವಿಡ್ 19 ಪ್ರಕರಣಗಳ ಸಂಖ್ಯೆ 14ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

ದೇಶದಲ್ಲಿ ಕೋವಿಡ್ ಎರಡನೇ ಅಲೆ ಹರಡಲು ಆರಂಭವಾದ ಸಂದರ್ಭದಲ್ಲಿ ಆಕ್ಸಿಜನ್ ಗೆ ವಿಪರೀತ ಬೇಡಿಕೆ ಬಂದಿತ್ತು. ಆದರೂ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಪರಿಸ್ಥಿತಿಯನ್ನು ಎದುರಿಸಿದ್ದೇವೆ ಎಂದು ಮೋದಿ ಹೇಳಿದರು. ಜಗತ್ತನ್ನು ಕಂಗೆಡಿಸಿರುವ ಅದೃಶ್ಯ ಅಥವಾ ರೂಪಾಂತರಿ ಸೋಂಕಿನ ವಿರುದ್ಧ ಹೋರಾಡಲು ನಮಗೆ ಇರುವ ಅತೀ ದೊಡ್ಡ ಅಸ್ತ್ರ ಯಾವುದೆಂದರೆ ಅದು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸುವುದು.

ದೇಶದಲ್ಲಿ ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟ ಇನ್ನೂ ಮುಂದುವರಿದಿದೆ. ಈ ಹಿಂದೆ ಸಿಡುಬು, ಪೋಲಿಯೋ, ದಡಾರದಂತಹ ಸೋಂಕಿಗೆ ವಿದೇಶಗಳಲ್ಲಿ ಚುಚ್ಚುಮದ್ದು ಕಂಡು ಹಿಡಿದ ಮೇಲೆ ನಮ್ಮಲ್ಲಿ ಚುಚ್ಚು ಮದ್ದು ತಯಾರಾಗುತ್ತಲೇ ಇರಲಿಲ್ಲ. ಆದರೆ ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿಯೂ ಭಾರತ ಕಡಿಮೆ ಅವಧಿ ಯಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ಜಗತ್ತಿನಲ್ಲಿ ಅತೀ ಹೆಚ್ಚು ಲಸಿಕೆ ಭಾರತದಲ್ಲಿ ನೀಡಲಾಗುತ್ತಿದೆ. 130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ಸವಾಲಿನ ಕೆಲಸವಾಗಿದೆ. ಆಧುನಿಕ ಜಗತ್ತು ಹಿಂದೆಂದೂ ಇಂತಹ ಸಂಕಷ್ಟ ಎದುರಿಸಿರಲಿಲ್ಲ. ಕೋವಿಡ್ ಈ ಶತಮಾನದ ಅತೀ ದೊಡ್ಡ ಮಹಾ ಮಾರಿಯಾಗಿದೆ. ಇಂತಹ ವೈರಸ್ ಹಿಂದೆಂದೂ ಕಂಡಿರಲಿಲ್ಲ. ಒಂದೇ ವರ್ಷದಲ್ಲಿ ಎರಡು ಲಸಿಕೆಗಳನ್ನು ಕಂಡು ಹಿಡಿದಿದ್ದೇವೆ. ದೇಶದಲ್ಲಿ 23 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ್ದೇವೆ. ಇದೀಗ ಕೋವಿಡ್ ಲಸಿಕೆಯೇ ನಮ್ಮ ಸುರಕ್ಷ ಕವಚವಾಗಿದೆ.

ದೇಶದ ಬಡವರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಸರ್ಕಾರ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಬದ್ಧವಾಗಿದೆ. ನಾವು ಕಡಿಮೆ ಅವಧಿಯಲ್ಲಿ ಹೆಚ್ಚು ಲಸಿಕೆ ಉತ್ಪಾದನೆ ಮಾಡಿದ್ದೇವೆ ಎಂದರು. ರಾಜ್ಯ ಗಳಿಂದ ಲಸಿಕೆ ನಿಯಂತ್ರಣ ಹಿಂಪಡೆದು 18+ ವರ್ಷದ ಮೇಲ್ಪಟ್ಟವರಿಗೆ ಉಚಿತ ಲಸಿಕೆಯನ್ನು ಜೂನ್ 21 ರಿಂದ ನೀಡಲಾಗುವುದೆಂದು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಹಣ ಕೊಟ್ಟು ಪಡೆಯುವರು ಪಡೆಯಬಹುದು ಸರಕಾರದ ವತಿಯಿಂದ 75% ಲಸಿಕೆ ಉಚಿತ, 25% ಖಾಸಗಿಯವರಿಗೆ ನೀಡುತ್ತಿದ್ದೇವೆಂದರು. 

 
 
 
 
 
 
 
 
 
 
 

Leave a Reply