ವಿದೇಶಕ್ಕೆ ಹೋಗುವ 45 ವರ್ಷ ಮೇಲ್ಪಟ್ಟವರು ಪಾಸ್ ಪೋರ್ಟ್ ನ್ನು ಗುರುತಿನ ಚೀಟಿಯಾಗಿ ಬಳಸಿ ಪಡೆಯಬಹುದು ಲಸಿಕೆ

ಉಡುಪಿ: ವ್ಯಾಸಾಂಗಕ್ಕೆಂದು ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಲಸಿಕೆ ಪಡೆಯುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯಿಂದ ಅನೆಕ್ಟರ್-3 ನೀಡಲಾಗುತ್ತಿದೆ.

ಈ ವೇಳೆ ಹೊರದೇಶಕ್ಕೆ ಉದ್ಯೋಗ ನಿಮಿತ್ತ ಹೋಗುವವರಲ್ಲಿ 45 ವರ್ಷ ಮೇಲ್ಪಟ್ಟವರು ಜಿಲ್ಲಾಧಿಕಾರಿ ಕಚೇರಿಗೆ ಅನಕ್ಸರ್ ಗಾಗಿ ಬರುತ್ತಿದ್ದು, ಈ ವಯೋಮಾನದವರು ಅನಕ್ಟರ್-3 ಗಾಗಿ ಈ ಕಚೇರಿಗೆ ಬಾರದೆ, ನೇರವಾಗಿ ತಮ್ಮ ಸಮೀಪದ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯದ ಲಸಿಕಾ ಕೇಂದ್ರಗಳಲ್ಲಿ ತಮ್ಮ ಪಾಸ್ ಪೋರ್ಟ್ ನ್ನು ಗುರುತಿನ ಚೀಟಿ ಆಗಿ ಬಳಸಿ ಲಸಿಕೆ ಪಡೆಯಲು ಪಡೆಯಬಹುದಾಗಿದೆ.

ಲಸಿಕೆ ಪಡೆಯುವ ಸಂದರ್ಭದಲ್ಲಿ Cowin ವೋರ್ಟ್ ನಲ್ಲಿ ಪಾಸ್‌ಪೋರ್ಟ್ ನ್ನು ಗುರುತಿನ ಚೀಟಿಯಾಗಿ ದಾಖಲು ಮಾಡಿಸುವಂತೆ ಹಾಗೂ ಲಸಿಕೆ ಪಡೆಯುವಲ್ಲಿ ಗೊಂದಲಗಳಿದ್ದರೆ ದೂ.ಸಂ.0820-2574802 ಅಥವಾ 1077 ನ್ನು ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply