ಧೀಂ ಕಿಟ ಯಕ್ಷ ಶಿಬಿರ ಅನಾವರಣ

ಕೋಟ :ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸುವಲ್ಲಿ ಯಕ್ಷಗಾನದಂತಹ ಕಲೆಯ ಕಲಿಕೆ ಪೂರಕವಾದುದು. ದೈಹಿಕ ವ್ಯಾಯಾಮದೊಂದಿಗೆ ಮಾನಸಿಕ ಬೆಳವಣಿಗೆ ಆಗುವುದು. ಪುರಾಣ ಜ್ಞಾನದಿಂದ ಮಕ್ಕಳ ಮನಸ್ಸು ಅರಳುವುದು. ವಿದ್ಯಾಲಯಗಳಲ್ಲಿ ಯಕ್ಷಗಾನದ ಕಲಿಕೆ ನಿರಂತರವಾಗಿರಲಿ” ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗುರು ಯಕ್ಷದೇಗುಲದ ಸುದರ್ಶನ ಉರಾಳ ಹೇಳಿದರು.

ಸಾಲಿಗ್ರಾಮ ಮಕ್ಕಳ ಮೇಳವು ಸಂಸ್ಕೃತಿ ಇಲಾಖೆಯ ಸಹಾಯನುದಾನದೊಂದಿಗೆ ಸಾಲಿಗ್ರಾಮ ಚಿತ್ರಪಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ಹತ್ತು ದಿವಸಗಳ ‘ಧೀಂ ಕಿಟ ಯಕ್ಷ ಶಿಬಿರ’ ವನ್ನು ಉದ್ಘಾಟಿಸಿ ಉರಾಳರು ಮಾತನಾಡಿದರು.

ಅಧ್ಯಕ್ಷತೆವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋತಿ ಪಿ ಮಾತನಾಡಿ, ಯಕ್ಷಗಾನವು ಕಣ್ಣಿಗೆ ಆಕರ್ಷಣಿಯವಾದ ಕಲೆಯಾಗಿದೆ. ಹತ್ತು ದಿವಸಗಳಲ್ಲಿ ಪೂuð ಯಕ್ಷಗಾನ ಕಲಿಕೆ ಸಾಧ್ಯವಾಗದಿದ್ದರೂ ಮಕ್ಕಳಿಕೆ ಅದರ ಪರಿಚಯ ಸಾಧ್ಯವಾಗುತ್ತದೆ. ಹೆಚ್ಚಿನ ಮಕ್ಕಳು ಈ ಶಿಬಿರದ ಫಲಾನುಭವಿಗಳಗಲಿ ಎಂದರು.
ಗೌರವ ಉಪಸ್ಥಿತರಿದ್ದ ಶಾಲಾ ಎಸ್. ಡಿ. ಏಂ. ಸಿ. ಅಧ್ಯಕ್ಷ ಶಂಕರ ದೇವಾಡಿಗ ಶುಭ ಹಾರೈಸಿದರು. ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ಥವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಭಾಗವತ ಗುರು ಲಂಬೋದರ ಹೆಗಡೆ ವಂದಿಸಿದರು. ಕಲಾವಿದ ಸುಹಾಸ ಕರಬ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply