ಶಾಲೆಗಳು ಹೊಸತನಗೊಂಡರೆ ಗ್ರಾಮಗಳು ಸುಭಿಕ್ಷೆಗೊಳ್ಳುತ್ತದೆ –ಕೆ.ನಾಗರಾಜ್ ಗಾಣಿಗ

ಕೋಟ: ಯಾವುದೇ ಒಂದು ಊರು ಅಭಿವೃದ್ಧಿಗೊಳ್ಳಬೇಕಾದರೆ ಆ ಪರಿಸರದ ಶೈಕ್ಷಣಿಕ ಕೇಂದ್ರದ ಮೇಲೆ ಅವಲಂಬಿತವಾಗಿರುತ್ತದೆ, ಆ ಮೂಲಕ ಶಾಲೆಗಳು ಹೊಸತನದ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಎಸ್.ಟಿ.ಜಿ.ಸಿ ವೆಂಚರ್ ಪ್ರೆöÊವೇಟ್ ಲಿಮಿಟೆಡ್ ರಾಜ್ಯ ಅಧ್ಯಕ್ಷ ಕೆ ನಾಗರಾಜ ಗಾಣಿಗ ಹೇಳಿದ್ದಾರೆ.
ಅವರು ಕೋಟ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿ ಹಿರಿಯ ಪ್ರಾಥಮಿಕ ಶಾಲೆ ಇದರ ಅಭಿವೃದ್ಧಿ ಗೆ ತಮ್ಮ ಸಂಸ್ಥೆ ಕೊಡಮಾಡಿದ ಛಕ್ ವಿತರಿಸುವ ಸಮಾರಂಭದಲ್ಲಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಆಂಗ್ಲಮಾಧ್ಯಮದ ದಿಸೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ ಇದನ್ನು ಗಮನಿಸಿದ ನಮ್ಮ ಸಂಸ್ಥೆ ಕೆಲವೊಂದು ಸರಕಾರಿ ಕನ್ನಡಮಾಧ್ಯಮ ಶಾಲೆಗಳ ಅಭಿವೃದ್ಧಿ ಟೊಂಕಕಟ್ಟಿ ಕಾರ್ಯನಿರ್ವಹಿಸುತ್ತಿದೆ.ನಾವು ಎಷ್ಟು ಬೆಳೆದೆವು ಎನ್ನುವುದು ಮುಖ್ಯವಲ್ಲ ನಾನು ನನ್ನ ಹುಟ್ಟೂರಿನ ಬಗ್ಗೆ ಎಷ್ಟು ಅಭಿಮಾನ ಹಾಗೂ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಕೆಲಸ ನಿರ್ವಹಿಸುತ್ತೇನೆ ಎಂಬುವುದನ್ನು ಮನಗಾಣಬೇಕಿದೆ.
ತನ್ನ ದುಡಿಮೆಯ ಅಲ್ಪಭಾಗ ಸಮಾಜಕ್ಕೆ ಮುಡಿಪಾಗಿಡುವ ಕಾಯಕ ನಮ್ಮ ಸಂಸ್ಥೆಯ ಎಂ.ಡಿ ಮಾಡುತ್ತಿದ್ದಾರೆ, ಅವರ ನಿರ್ದೇಶನದಂತೆ ನಾವುಗಳು ರಾಜ್ಯದ ವಿವಿಧ ಭಾಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಸ್.ಟಿಜಿಸಿ ವೆಂಚರ್ ಪ್ರೈವೇಟ್ ಲಿಮಿಟೆಡ್ ಮಾಲಿಕ ವಿನೋದ್ ಕುಮಾರ್ ಶಾಲಾ ಕಟ್ಟಡ ಸಮಿತಿಯ ಅಧ್ಯಕ್ಷ ಆನಂದ್ ಸಿ ಕುಂದರ್ ರವರಿಗೆ ೪೦ಕೋಟಿ ಛಕ್ ಹಸ್ತಾಂತರಿಸಿದರು. ಇದೇ ವೇಳೆ ವಿನೋದ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.

ಶಾಲೆಯ ಅಭಿವೃದ್ಧಿಯ ಬಗ್ಗೆ ಕನಸುಕಂಡ ಹಳೇ ವಿದ್ಯಾರ್ಥಿ ಹಾಗೂ ಎಸ್.ಟಿಜಿಸಿ ಸಂಸ್ಥೆಯ ರಾಜ್ಯಾಧ್ಯಕ್ಷ ಕೆ.ನಾಗರಾಜ್ ಗಾಣಿಗ ಮತ್ತು ಸಂಸ್ಥೆಯ ತಮಿಳುನಾಡು ಅಧ್ಯಕ್ಷ ಕಾತೀಕೆನ್ ಎಸ್ ಇವರುಗಳನ್ನು ಅಭಿನಂದಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ನಿಕಟಪೂರ್ವ ಸಂಚಾಲಕ ಸತೀಶ್ ಕಾರಂತ್,ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ,ಕಟ್ಟಡ ಸಮಿತಿಯ ಪ್ರಮುಖರಾದ ರಾಘವ ನಾಯಕ್,ಇಬ್ರಾಹಿಂ ಸಾಹೇಬ್ ಕೋಟ,ಜಿ.ಸತೀಶ್ ಹೆಗ್ಡೆ,ಚಂದ್ರಯ್ಯ ಆಚಾರ್ಯ, ರಾಘವೇಂದ್ರ ಪೂಜಾರಿ,ಜಿ.ವಿ ಅಶೋಕ್ ಹೇರ್ಳೆ,ಸದಾನಂದ ಪೂಜಾರಿ,ರವೀಂದ್ರ ಜೋಗಿ,ಚಂದ್ರ ಪೂಜಾರಿ,ಸಂತೋಷ್ ಪ್ರಭು,ಜಿ.ತಿಮ್ಮ ಪೂಜಾರಿ,ಶಿವರಾಮ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸಚಿನ್ ಕಾರಂತ್ ಪ್ರಾಸ್ತಾವನೆ ಸಲ್ಲಿಸಿದರು.ಆಡಳಿತ ಮಂಡಳಿ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ಸ್ವಾಗತಿಸಿದರು.ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ನಿರೂಪಿಸಿದರು. ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ ಸದಸ್ಯ ಕೆ.ಅನಂತಪದ್ಮನಾಭ ಐತಾಳ್ ವಂದಿಸಿದರು.

ಕೋಟ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿ ಹಿರಿಯ ಪ್ರಾಥಮಿಕ ಶಾಲೆ ಇದರ ಅಭಿವೃದ್ಧಿ ಗೆ ತಮ್ಮ ಸಂಸ್ಥೆ ಕೊಡಮಾಡಿದ ಛಕ್ ವಿತರಿಸುವ ಸಮಾರಂಭದಲ್ಲಿ ಎಸ್.ಟಿಜಿಸಿ ವೆಂಚರ್ ಪ್ರೈವೇಟ್ ಲಿಮಿಟೆಡ್ ಮಾಲಿಕ ವಿನೋದ್ ಕುಮಾರ್‌ರವನ್ನು ಸನ್ಮಾನಿಸಲಾಯಿತು. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ,ಕಟ್ಟಡ ಸಮಿತಿಯ ಪ್ರಮುಖರಾದ ರಾಘವ ನಾಯಕ್,ಇಬ್ರಾಹಿಂ ಸಾಹೇಬ್ ಕೋಟ,ಜಿ.ಸತೀಶ್ ಹೆಗ್ಡೆ, ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ ಸದಸ್ಯ ಕೆ.ಅನಂತಪದ್ಮನಾಭ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply