ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ದೇವಳದ ಪುನರ್‌ಪ್ರತಿಷ್ಟೆ ಬ್ರಹ್ಮಕಲಶ ಪುಣ್ಯೋತ್ಸವ ಸಂಭ್ರಮ

ಶ್ರೀ ಮಹಾಲಕ್ಷ್ಮೀ  ದೇವಸ್ಥಾನ ಶ್ರೀಕ್ಷೇತ್ರ ಉಚ್ಚಿಲ ದೇವಳದ ಪುನರ್‌ಪ್ರತಿಷ್ಟೆ ಬ್ರಹ್ಮಕಲಶ ಪುಣ್ಯೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವವು ಏ. 1ರಿಂದ ಮೊದಲ್ಗೊಂಡು 15ರ ವರೆಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ದೇವಳದ ಆವರಣದಲ್ಲಿ ಅನಾವರಣಗೊಳಿಸಲಾಯಿತು.
ಬಾಲಾಲಯದಲ್ಲಿರುವ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸುವ ಮೂಲಕ ಆಮಂತ್ರಣ ಪತ್ರಿಕೆಯನ್ನು ಶ್ರೀ  ಶ್ರೀಮಹಾಲಕ್ಷ್ಮೀ  ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಬಿಡುಗಡೆಗೊಳಿಸಿದರು. ಕೇರಳ ಪಯ್ಯನೂರು ಜ್ಯೋತಿಷಿಗಳಾದ ಮಾಧವನ್ ಪೊದ್ವಾಳ ಹಾಜರಿದ್ದು ಶುಭ ಹಾರೈಸಿದರು.
ಉಚ್ಚಿಲ  ಶ್ರೀ ಮಹಾಲಕ್ಷ್ಮೀ  ದೇವಳವು ಅತ್ಯಂತ ಆಕರ್ಷಣೀಯ ಹಾಗೂ ಕಾಷ್ಠ ಶಿಲ್ಪದ ಸೊಬಗಿನೊಂದಿಗೆ ಕಂಗೊಳಿಸುತ್ತಿದೆ. ದೇವಳದ  ಒಳಾಂಗಣ, ಹೊರಾಂಗಣದಲ್ಲೂ ಕಾಷ್ಟ ಶಿಲ್ಪಕ್ಕೆ ವಿಶೇಷ ಒತ್ತು ನೀಡಲಾಗಿದೆ. ಪುಷ್ಕರಿಣಿ, ನಾಗಾಲಯ, ಪರಿವಾರ ದೇವತೆಗಳ ಗುಡಿಗಳು ತುಳುನಾಡಿನ ಪರಂಪರೆಯ ಸಂಕೇತವಾಗಿದೆ. ರಾಜಗೋಪುರವಂತೂ ಭಕ್ತಾಧಿಗಳ ಗಮನ ಸೆಳೆಯುತ್ತಿದೆ.  
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ  ಜಯ ಸಿ. ಕೋಟ್ಯಾನ್, ದೇವಳದ ಜೀರ್ಣೋದ್ಧಾರ ಸಮಿತಿ  ಅಧ್ಯಕ್ಷ  ಗುಂಡು ಬಿ. ಅಮೀನ್, ದೇವಳದ ಕ್ಷೇತ್ರಾಡಳಿತ ಸಮಿತಿ  ಅಧ್ಯಕ್ಷ    ವಾಸುದೇವ ಸಾಲ್ಯಾನ್, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್  ಕುಂದರ್, ಕೋಶಾಕಾರಿ ಶರತ್  ಎರ್ಮಾಳ್, ಜತೆ ಕಾರ್ಯದರ್ಶಿ ಮೋಹನ್ ಕರ್ಕೇರಾ ತೋನ್ಸೆ  ದಕ. ಮೊಗವೀರ ವಿಜಯ ಕುಂದರ್, ದೇವಳದ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಪ್ರಮುಖರಾದ ಮೋಹನ್ ಬೆಂಗ್ರೆ,  ಉದ್ಯಮಿ `ಭುವನೇಂದ್ರ ಕಿದಿಯೂರು, ಮೊಗವೀರ ಮಹಾಜನ ಸಂಘದ ಬಗ್ವಾಡಿ ಕುಂದಾಪುರ ಶಾಖೆ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, 
ದೇವಳದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶಂಕರ್ ಸಾಲ್ಯಾನ್, ಕೋಶಾಕಾರಿ ವಿನಯ್ ಕರ್ಕೇರ ಮಲ್ಪೆ, ಮಲ್ಪೆ ಮೀನುಗಾರರ ಸಂಘದ  ಅಧ್ಯಕ್ಷ  ದಯಾನಂದ ಕೆ. ಸುವರ್ಣ, ತಾಂಡೇಲರ ಸಂಘದ  ಅಧ್ಯಕ್ಷ  ರವಿರಾಜ್ ಸುವರ್ಣ, ಆಳ ಸಮುದ್ರ ಬೋಟ್ ಮಾಲೀಕರ ಸಂಘದ  ಅಧ್ಯಕ್ಷ ಸುಭಾಸ್ ಮೆಂಡನ್, ಮುಖಂಡರಾದ ನಾರಾಯಣ ಕರ್ಕೇರ, ಶಿವಕುಮಾರ್ ಎರ್ಮಾಳು, ಶಿವರಾಂ ಕೆ., ಮೊಗವೀರ ಯುವ ಸಂಘಟನೆ  ಅಧ್ಯಕ್ಷ  ರಾಜೇಂದ್ರ ಹಿರಿಯಡ್ಕ, ಕಾರ್ಯದರ್ಶಿ ರವೀಶ್, ಸರಳಾ ಕಾಂಚನ್, ದ.ಕ. ಮೊಗವೀರ ಮಹಿಳಾ ಮಹಾಜನ ಸಂಘದ  ಅಧ್ಯಕ್ಷ   ಅಪ್ಪಿ  ಎಸ್. ಸಾಲ್ಯಾನ್, ಮಲ್ಪೆ ಮೀನುಗಾರರ ಸಂಘದ ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಹಾಗೂ ಮೀನುಗಾರರ ಸಂಘದ ಸದಸ್ಯರು, ಯುವ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply