ದಿವ್ಯಾಂಗರಿಗೆ ಗಿಫ್ಟ್ ನೀಡಿದ ವಿಜಯ್ ಕೊಡವೂರು

ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ನಡೆಯಲು, ದುಡಿಯಲು ಸಾಧ್ಯವಿಲ್ಲದ ದಿವ್ಯಾಂಗರಿಗೆ ವೀಲ್ ಚಯರ್ ,ವಾಟರ್ ಬೆಡ್,ವಾಕರ್, ಹೊಲಿಗೆ ಯಂತ್ರ, ಮತ್ತು ಅಕ್ಕಿಯನ್ನು ಮನೆ ಮನೆಯಿಂದ ಗುಜರಿ ಸಂಗ್ರಹಿಸಿ ನೀಡುತ್ತಿದ್ದೇವೆ ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರು ಮತ್ತು ಉಡುಪಿ ನಗರಸಭೆ ಸದಸ್ಯರಾದ ಕೆ ವಿಜಯ್ ಕೊಡವೂರು ತಿಳಿಸಿದರು.

ನಾವು ಮನೆಯ, ಸಂಬಂಧಿಕರ ಗೃಹ ಪ್ರವೇಶಕ್ಕೆ, ಮನೆಯ ಹತ್ತಿರದ,ನಮ್ಮ ಸ್ನೇಹಿತರ ಶುಭ ಕಾರ್ಯಕ್ಕೆ ಉಡುಗೊರೆಯನ್ನು ನೀಡಿ ಹಾರೈಸಿ ಅವರ ಮುಂದಿನ ಜೀವನ ಸುಖಕರ ಆಗಲಿ ಎಂದು ಹಾರೈಸುತ್ತೇವೆ.

ಅದೇ ರೀತಿ ನಮ್ಮ ಪರಿಸರದಲ್ಲಿ ನಮ್ಮ ಸಮಾಜದಲ್ಲಿರುವ ದೀನ ದುರ್ಬಲರು, ದುಡಿಯಲು, ನಡೆಯಲು ಸಾಧ್ಯವಿಲ್ಲದ ಬದುಕೇ ಕಷ್ಟಕರ ಆಗಿರುವ ದಿವ್ಯಾಂಗ ಗಮನ ಕೊಡುವ ಅವಶ್ಯಕತೆ ಇದೆ.ಅವರ ಅಪೇಕ್ಷೆಗಳು ತುಂಬಾ ಇದ್ದು ಅದನ್ನು ಪೂರೈಸುವ ಜವಾಬ್ದಾರಿ ನಮ್ಮದಾಗಿದೆ ಅದಕ್ಕಾಗಿ ನಮ್ಮ ಮನೆಯಲ್ಲಿರುವ ಗುಜರಿ ಸಾಮಗ್ರಿಗಳನ್ನು ನಾವು ನೀವು ದಿವ್ಯಾಂಗ ರಕ್ಷಣಾ ಸಮಿತಿಗೆ ನೀಡಿದರೆ ಸಮಿತಿಯ ವತಿಯಿಂದ ಅವರಿಗೆ ಬೇಕಾಗುವ ಸಾಮಗ್ರಿಗಳು ನೀಡುವ ಕಾರ್ಯ ನಡೆಯುತ್ತಿದೆ.

ಕಳೆದ 2 ವರ್ಷಗಳಿಂದ ಅವರಿಗೆ ಬೇಕಾಗುವ ಮೆಡಿಕಲ್ ಕಿಟ್,ಅಕ್ಕಿ, ವಾಕರ್, ವೀಲ್ ಚೇರ್, ಹೊಲಿಗೆ ಯಂತ್ರ, ಔಷಧಿಗೆ ಧನ ಸಹಾಯ , ಹೀಗೆ ಹಲವು ಸಮಾಗ್ರಿಗಳನ್ನು ನೀಡುವ ಕಾರ್ಯ ನಿಮಗೆ ತಿಳಿದಿದೆ ಎಂದು ನಂಬುತ್ತೇವೆ. ಅದೇ ರೀತಿ ನೀವು ಮುಂದಿನ ದಿನಗಳಲ್ಲಿ ಸಹಕರಿಸಬೇಕು ಈಗಾಗಲೇ ಕೊಡವೂರು ವಾರ್ಡಿನ ಮನೆ – ಮನೆಯಿಂದ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಉಡುಪಿ ತಾಲೂಕು ಉಡುಪಿ ಜಿಲ್ಲೆಯಾದ್ಯಂತ ಈ ರೀತಿಯ ಉಡುಗೊರೆಯನ್ನು ನೀಡಿದರೆ ಉಡುಪಿ ಜಿಲ್ಲೆಯಾದ್ಯಂತ ದಿವ್ಯಾಂಗರಿಗೆ ಆಸರೆಯನ್ನು ನೀಡಬಲ್ಲೆವು ಎಂದು ವಿಜಯ್ ಕೊಡವೂರು ತಿಳಿಸಿದರು.

ಈ ಸಂದರ್ಬದಲ್ಲಿ ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು, ಅಣ್ಣಪ್ಪ ಶೆಟ್ಟಿ ಜುಮಾದಿ ನಗರ, ಅಜಿತ್ ಸೇನರ ಜಿಡ್ಡ, ವಿನಯ್ ಗರ್ಡೆ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply