Janardhan Kodavoor/ Team KaravaliXpress
30.6 C
Udupi
Sunday, October 2, 2022
Sathyanatha Stores Brahmavara

ಲಿಂಗಧಾರಣೆಯಿಂದ ದೇಹವೇ ದೇವಾಲಯ ಶ್ರೀ ಕಾಶಿ ಜಗದ್ಗುರು

ಪನಪೆಟ್ಟಿ,ಭರನಿಕ್ಕಾವು ಕೊಲ್ಲಂ(ಕೇರಳ) ದೇಹದ ಮೇಲೆ ಇಷ್ಟ ಲಿಂಗವನ್ನು ಧರಿಸಿರುವ ದೇಹವು ದೇವಾಲಯದಷ್ಟು ಪವಿತ್ರವಾಗುತ್ತದೆ. ಎಂಬ ವಿಚಾರವನ್ನು ಶ್ರೀ ಕಾಶಿ ಜಗದ್ಗು ರು ಡಾ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಕೇರಳದ ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿರುವ ಭರಣಿಕ್ಕಾವು ಪನಪೆಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡು ಕಾಶಿ ಪೀಠದ ಶಾಖಾಮಠವಾದ ಕೇರಳ ವೀರಶೈವ ಮಠ, ಕಾಶಿ ಜಂಗಮವಾಡಿಮಠ ದಲ್ಲಿ ವಿಶ್ವನಾಥ ಮಹಾಲಿಂಗದ ಪ್ರಾಣ ಪ್ರತಿಷ್ಠಾಪನೆ ಹಾಗೂ ಇಷ್ಟಲಿಂಗ ದೀಕ್ಷಾ ಸಮಾರಂಭದಲ್ಲಿ ಆಶೀರ್ವಚನವನ್ನು ದಯಪಾಲಿಸುತ್ತಾ ಈ ವಿಚಾರವನ್ನು ತಿಳಿಸಿದರು.
ಭೂಮಿಯ ಮೇಲೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದರೆ ಆ ಭೂಮಿ ಒಂದು ಪವಿತ್ರವಾದ ಕ್ಷೇತ್ರ ವಾಗುವಂತೆ ದೇಹದ ಮೇಲೆ ಇಷ್ಟ ಲಿಂಗವನ್ನು ಧರಿಸಿದರೆ ಪ್ರತಿಯೊಬ್ಬರ ದೇಹವೂ ಕೂಡ ಒಂದು ಪವಿತ್ರವಾದ ದೇವಾಲಯವಾಗಿ ಪರಿಣಮಿಸುತ್ತದೆ. ಅಂತೆಯೇ ಸನಾತನ ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಭೂಲೋಕದಲ್ಲಿ ಯುಗಯುಗಳಲ್ಲಿ ಅವತರಿಸಿ ಸಮಸ್ತ ದೇವ, ದಾನವ ಮತ್ತು ಮಾನವರಿಗೆ ದೀಕ್ಷೆಯನ್ನು ಮಾಡಿ ಇಷ್ಟಲಿಂಗವನ್ನು ಧರಿಸುವುದರ ಮೂಲಕ ಸರ್ವರಿಗೂ ಸಮಾನತೆ ಹಕ್ಕನ್ನು ದಯಪಾಲಿಸಿದ್ದಾರೆ. ಇಷ್ಟಲಿಂಗ ಧಾರಣೆಗೆ ವರ್ಣಾಶ್ರಮಗಳ, ಸ್ತ್ರೀ ಪುರುಷರ ಭೇದ ಭಾವವಿರುವುದಿಲ್ಲ. ಎಲ್ಲ ವರ್ಣಗಳ, ಎಲ್ಲ ಆಶ್ರಮಗಳ, ಎಲ್ಲ ದೇಶಗಳ ಜನರು ಅಪೇಕ್ಷೆ ಪಟ್ಟರೆ ಅವರಿಗೆ ವಿಧಿವತ್ತಾಗಿ ದೀಕ್ಷಾ ಸಂಸ್ಕಾರವನ್ನು ಕೊಟ್ಟು ಲಿಂಗ ದೀಕ್ಷೆಯನ್ನು ಮಾಡಿ ಇದೇ ಜನ್ಮದಲ್ಲಿ ಶಿವಯೋಗ ಸಾಧನೆಯಿಂದ ಶಿವ ಸ್ವರೂಪನಾಗುವ ಸದವಕಾಶವನ್ನು ವೀರಶೈವ ಧರ್ಮದಲ್ಲಿ ಅನುಗ್ರಹಿಸಲಾಗಿದೆ.
ಕೇರಳ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವರಿದ್ದು ಇಲ್ಲಿವರೆಗೆ ಅವರಿಗೆಲ್ಲ ಮಾರ್ಗದರ್ಶನ ಮಾಡಲು ಒಂದು ಮಠವಿರಲಿಲ್ಲ ಆದರೆ ಶ್ರೀ ಸುನಿತ್ ಮತ್ತು ರೇವೇಂದ್ರ ಇವರು ಶ್ರೀ ವೀರಶೈವ ಬಸವೇಶ್ವರ ವೆಲ್ಫೇರ್ ರ್ಚಾರಿಟೇಬಲ್ ಟ್ರಸ್ಟನ್ನು ಸ್ಥಾಪಿಸಿ ಕೇರಳದ ಕೊಲ್ಲಂ ಜಿಲ್ಲೆಯ ಭರಣಿಕ್ಕಾವು ಪನಪೆಟ್ಟಿಯಲ್ಲಿ ಮೂರುವರೆ ಎಕರೆ ಜಮೀನನ್ನು ಖರೀದಿಸಿ 50 ಜನ ಸದ್ಭಕ್ತರಿಂದ ಮೂರು ಕೋಟಿ ರೂ.ದೇಣಿಗೆಯನ್ನು ಸಂಗ್ರಹಿಸುವುದರ ಜೊತೆಗೆ ಕೇರಳ ಸರ್ಕಾರದಿಂದ ಒಂದು ಕೋಟಿ 80 ಲಕ್ಷ ರೂಪಾಯಿ ಅನುದಾನವನ್ನು ಪಡೆದು ಇಲ್ಲಿ ಸಾರ್ವಜನಿಕರಿಗಾಗಿ ಒಂದು ಮಠವನ್ನು ನಿರ್ಮಿಸಿ ಅಲ್ಲಿ ಕಾಶಿ ವಿಶ್ವೇಶ್ವರ ಶಿವಲಿಂಗವನ್ನು ಪ್ರತಿಷ್ಠಾಪಿಸುವುದರ ಜೊತೆಗೆ ಕೇರಳದ ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಇಂದು ಶಿವದೀಕ್ಷಾ ಸಮಾರಂಭವನ್ನು ಹಮ್ಮಿಕೊಂಡಿರುವುದು ಅತ್ಯಂತ ಸಂತೋಷವನ್ನು ತಂದಿದೆ ಎಂಬುದಾಗಿ ಶ್ರೀ ಕಾಶಿ ಜಗದ್ಗುರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀ ಸನ್ನಿಧಿಯವರು ಹಿಂದಿ ಭಾಷೆಯ ಆಶೀರ್ವಚನದ ಅನುವಾದವನ್ನು ಶ್ರೀ ಅರುಣ್ ಅಪ್ಪುಕುಟ್ಟನ್ ಅವರು ಮಲಯಾಳಂ ಭಾಷೆಗೆ ಅನುವಾದಿಸಿ ಸರ್ವರನ್ನು ಸಂತೋಷಪಡಿಸಿದರು.
ಸಮಾರಂಭದ ಪ್ರಾರಂಭದಲ್ಲಿ ಬೆಂಗಳೂರು ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರು ಇಂಗ್ಲಿಷ್ ಭಾಷೆಯಲ್ಲಿ ವೀರಶೈವ ಧರ್ಮ, ಪಂಚಪೀಠಗಳು ಹಾಗೂ ಮಹಾತ್ಮ ಬಸವೇಶ್ವರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಹೇಳಿದರು. ಈ ಸಭೆಯಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡ ಅಮರೇಶ್ವರ ಮಠದ ಶ್ರೀ ಡಾ. ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!