ಫೆಕೋ ಪೋಟ್ಪುರ್ರಿ  & ಹ್ಯಾಂಡ್ಸ್ ಆನ್ ವೆಟ್ ಲ್ಯಾಬ್ ಟ್ರೈನಿಂಗ್” ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಮಣಿಪಾಲ, 5ನೇ ಮೇ 2022: ನೇತ್ರಶಾಸ್ತ್ರ  ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ,  ಮಾಹೆ ಮಣಿಪಾಲ ಇದರ ಸಹಯೋಗದಲ್ಲಿ ಒ ಈ ಯು   ಹಳೆ ವಿದ್ಯಾರ್ಥಿ  ಸಂಘ  ಮಾಹೆ  ಮಣಿಪಾಲದ ಸಹಯೋಗದಲ್ಲಿ ಉಡುಪಿ ಜಿಲ್ಲಾ ಆಪ್ತಾಲ್ಮಿಕ್ ಸೊಸೈಟಿ (ಯು ಡಿ ಒ ಎಸ್ ) ಮತ್ತು ಕರ್ನಾಟಕ ಆಪ್ತಾಲ್ಮಿಕ್ ಸೊಸೈಟಿ (ಕೆ ಒ ಎಸ್ ) ಆಶ್ರಯದಲ್ಲಿ “ಫೆಕೋ ಪೋಟ್ಪುರ್ರಿ  & ಹ್ಯಾಂಡ್ಸ್ ಆನ್ ವೆಟ್ ಲ್ಯಾಬ್ ಟ್ರೈನಿಂಗ್” ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಜರುಗಿತು.  1ನೇ ಮೇ, 2022 ರಂದು ಡಾ. ಟಿಎಂಎ ಪೈ ಆಡಿಟೋರಿಯಂ ಹಾಲ್, ಕೆಎಂಸಿ, ಮಣಿಪಾಲದಲ್ಲಿ ನಡೆದ ಕಾರ್ಯಕ್ರಮವನ್ನು  ಮಾಹೆ ಮಣಿಪಾಲದ ಸಹ ಉಪ ಕುಲಪತಿಗಳಾದ  ಡಾ. ಪಿ ಎಲ್ ಎನ್ ಜಿ ರಾವ್  (ವೈದ್ಯಕೀಯ ಮತ್ತು ದಂತ ವಿಜ್ಞಾನ)  ಉದ್ಘಾಟಿಸಿದರು. ಕೆ ಎಂ ಸಿ ಸಹ  ಡೀನ್ ಡಾ.ಕೃಷ್ಣಾನಂದ ಪ್ರಭು ಸ್ವಾಗತಿಸಿದರು. ಗೌರವ  ಅತಿಥಿಗಳಾಗಿ ಕರ್ನಾಟಕ ಆಪ್ತಾಲ್ಮಿಕ್ ಸೊಸೈಟಿಯ ಉಪಾಧ್ಯಕ್ಷ ಡಾ.ಕೃಷ್ಣ ಪ್ರಸಾದ್ ಕೂಡ್ಲು ಮತ್ತು ಉಡುಪಿ ಜಿಲ್ಲಾ ನೇತ್ರಶಾಸ್ತ್ರ  ಸೊಸೈಟಿಯ ಅಧ್ಯಕ್ಷ ಡಾ.ಶ್ರೀನಾಥ್ ಕಾಮತ್ ಉಪಸ್ಥಿತರಿದ್ದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ  ಮತ್ತು  ಸಂಘಟನಾ ಅಧ್ಯಕ್ಷೆ ಡಾ. ಸುಲತಾ ವಿ ಭಂಡಾರಿ ಮಾತನಾಡಿ, “ಪ್ಯಾಕೋಎಮಲ್ಸಿಫಿಕೇಶನ್ ಅಥವಾ ಅತೀ ಸಣ್ಣ ಗಾಯದ  ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯು ಕಣ್ಣಿನ ಪೊರೆಗಾಗಿ ಪ್ರಸ್ತುತ ವ್ಯಾಪಕವಾಗಿ ನಿರ್ವಹಿಸುತ್ತಿರುವ  ಶಸ್ತ್ರಚಿಕಿತ್ಸೆಯಾಗಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಂಭವಿಸುವ ಕಷ್ಟಕರ ಸಂದರ್ಭಗಳ ಕುರಿತು ಈ ನಿರಂತರ ಶಿಕ್ಷಣ ಕಾರ್ಯಕ್ರಮವು ಒತ್ತಿಹೇಳಿತು. ಖ್ಯಾತ ನೇತ್ರ ತಜ್ಞರು  ಫಾಕೊಎಮಲ್ಸಿಫಿಕೇಶನ್  ನಲ್ಲಿರುವ ಸೂಕ್ಷ್ಮ ವ್ಯತ್ಯಾಸಗಳನ್ನು   ವೀಡಿಯೊಗಳು ಮತ್ತು ವಿಭಿನ್ನ ತಂತ್ರಗಳ ಮೂಲಕ   ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ  ಪ್ರದರ್ಶಿಸಿ ಮಾತನಾಡಿದರು.  ಕಾರ್ಯಕ್ರಮದಲ್ಲಿ ಅನೇಕ  ನೇತ್ರಶಾಸ್ತ್ರಜ್ಞರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು  ಹಾಜರಿದ್ದರು. ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಶವೆಂದರೆ ವೆಟ್ ಲ್ಯಾಬ್ ತರಬೇತಿಯ ಮೂಲಕ  ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಣ್ಣ ಛೇದನದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಫಾಕೊಎಮಲ್ಸಿಫಿಕೇಶನ್ ಮತ್ತು ಇಂಟ್ರಾವಿಟ್ರಿಯಲ್ ಚುಚ್ಚುಮದ್ದನ್ನು ನೀಡುವ ಕುರಿತು ತರಬೇತಿ ನೀಡಲಾಯಿತು . ಡಾ.ಸುಧಾ ಜಿ ಮೆನನ್ ವಂದಿಸಿದರು. ಡಾ. ಐಶ್ವರ್ಯ ಕುಲಕರ್ಣಿ ಮತ್ತು ಡಾ. ಆಶ್ರಿತ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply