ಕೆ.ಎಲ್.ಕುಂಡಂತಾಯರ ‘ಧರ್ಮ ಜಾಗರ’ ಬಿಡುಗಡೆ

ಕಿನ್ನಿಗೋಳಿ : ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್.ನಂದೀಶ್ ಹಂಚೆ ಅವರು ಕೆ.ಎಲ್.ಕುಂಡಂತಾಯರ ‘ಧರ್ಮ ಜಾಗರ’ ಕೃತಿಯನ್ನು ಬಿಡುಗಡೆಗೊಳಿಸಿದರು.

 ಕಿನ್ನಿಗೋಳಿಯ ‘ಅನಂತಪ್ರಕಾಶ ಪುಸ್ತಕಮನೆ’ ಆಯೋಜಿಸಿದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ‘ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ’ಯನ್ನು ಡಾ.ನಂದೀಶ ಹಂಚೆ ಉದ್ಘಾಟಿಸಿದ ಸಂದರ್ಭದಲ್ಲಿ ‘ಧರ್ಮ ಜಾಗರ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.

 ಕರ್ನಾಟಕ ಸರಕಾರದ ಕನ್ನಡ ಪುಸ್ತಕ‌ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ, ಕಿನ್ನಿಗೋಳಿ ಪ.ಪಂ.ಮುಖ್ಯಾಧಿಕಾರಿ ಸಾಯೀಶ್ ಚೌಟ,ಕೆ.ಎಲ್.ಕುಂಡಂತಾಯ, ಹಿರಿಯ ಸಾಹಿತಿ – ವಿದ್ವಾಂಸ ಶ್ರೀಧರ ಡಿ.ಎಸ್. , ಸಾಹಿತಿ ,ಚಿಂತಕ ಎಕ್ಕಾರು ಉಮೇಶರಾವ್ ,ಅನಂತ ಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ, ಗಾಯತ್ರೀ ಉಡುಪ, ನಿವೃತ್ತ ಪಾಂಶುಪಾಲ ಸುದರ್ಶನ ವೈ.ಎಸ್.,ಗುರುರಾಜ ಮಂಜಿತ್ತಾಯ ಮುಂತಾದವರು ಉಪಸ್ಥಿತರಿದ್ದರು.

ನಮ್ಮ ‘ಪರ್ವ’ಗಳು ಅಥವಾ ‘ಹಬ್ಬ’ಗಳ ಆಚರಣೆ ಕುರಿತು ಸಣ್ಣ ಸಣ್ಣ ಪುಸ್ತಕ ಪ್ರಕಟಿಸುವ ಉದ್ದೇಶದಂತೆ ಮೂರು ತಿಂಗಳಲ್ಲಿ ಮೂರು ಕೃತಿಗಳು ಬಿಡುಗಡೆಗೊಂಡಿವೆ , ನವರಾತ್ರಿ ಹಾಗೂ ಒಂಬತ್ತು ದುರ್ಗಾ ಸನ್ನಿಧಾನಗಳ ಕುರಿತ ಮಾಹಿತಿ ಇರುವ ‘ನವನವ ದುರ್ಗಾ’.

ದೀಪಾವಳಿ ಹಾಗೂ ಗೋಪೂಜೆ ,ತುಳಸಿ ಪೂಜೆ ,ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಕುರಿತ ಮಾಹಿತಿಗಳಿರುವ ‘ಸೊಡರ ಹಬ್ಬ’ ಈಗಾಗಲೇ ಬಿಡುಗಡೆಯಾಗಿದೆ. ‘ಧರ್ಮ ಜಾಗರ’ದಲ್ಲಿ ಷಷ್ಠಿ ,ಮಕರ ಸಂಕ್ರಮಣ , ಶಿವ ರಾತ್ರಿ ಪರ್ವಗಳ ಹಾಗೂ ಆಚಾರ್ಯ ಮಧ್ವರ ಕುರಿತಂತೆ ಹದಿನೆಂಟು ಲೇಖನಗಳಿವೆ.  

 
 
 
 
 
 
 
 
 
 
 

Leave a Reply