ಇಂದ್ರಾಳಿ ರೈಲ್ವೆ ಮೇಲ್ಸೇತುವೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಮಣಿಪಾಲ : ಉಡುಪಿ ನಗರದ ಮಣಿಪಾಲಕ್ಕೆ ಹೋಗುವ ರಸ್ತೆಯಲ್ಲಿ ಇಂದ್ರಾಳಿ ರೈಲ್ವೆ ಬ್ರಿಡ್ಜ್ ಸಮೀಪ ರಸ್ತೆ ದುರಸ್ತಿಯ ಕಾರಣ ಅಲ್ಲಿ ದಿನಾಲೂ ಟ್ರಾಫಿಕ್ ಜಾಮ್. ಪ್ರಯಾಣಿಕರು ದಿನಾ ಪರದಾಡುವ ಪರಿಸ್ಥಿತಿ ಉಂಟಾಗಿದೆ.
 
ನಿನ್ನೆ ಮಣಿಪಾಲ ಕಡೆಯಿಂದ ಉಡುಪಿಗೆ ಹೊರ ಜಿಲ್ಲೆಗಳ ಆಂಬುಲೆನ್ಸ್ ಬರುವಾಗ, ದಯವಿಟ್ಟು ಮಣಿಪಾಲದಲ್ಲೇ ಆಂಬುಲೆನ್ಸ್ ಗಳ ಮಾರ್ಗ ಡೈವರ್ಟ್ ಮಾಡಿ, ಇಂದು ಎರಡು ಆಂಬುಲೆನ್ಸ್ ಗಳು 15 ನಿಮಿಷಗಳ ಕಾಲ ಬ್ಲಾಕ್ ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ್ದನ್ನು ಕಣ್ಣಾರೆ ಕಂಡಿದ್ದೇವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜನರು ರೋಡ್ ಬ್ಲಾಕ್ ಸಮಸ್ಯೆಯಿಂದ ರೋಸಿ ಹೋಗಿ ಮಣಿಪಾಲ ಅಥವಾ ಉಡುಪಿ ಕಡೆಯಿಂದ ಇಂದ್ರಾಳಿ ರೈಲ್ವೆ ಬ್ರಿಜ್ ಬಳಿ ಬಂದರೆ, ಅಲ್ಲಿ ಟ್ರಾಫಿಕ್ ಪೊಲೀಸರು ದಂಡ ಹಾಕಲು ಕಾದು ಕುಳಿತಿರುತ್ತಾರೆ.  ರಸ್ತೆ ಅವ್ಯವಸ್ತೆ ಬಗ್ಗೆ ಹಿಡಿಶಾಪ ಹಾಕಿಕೊಂಡು ಬರುವ ಜನರಿಂದ ದಂಡ ವಸೂಲಿ ಮಾಡುವುದು ಸರಿಯೇ? ದಯವಿಟ್ಟು ಸರಿಯಾಗಿರುವ ಯಾವುದಾದರೂ ರಸ್ತೆಯಲ್ಲಿ ನಿಂತು ಬೇಕಿದ್ದರೆ ದಂಡ ಹಾಕಿ, ರೈಲ್ವೆ ಬ್ರಿಜ್ ಬಳಿ ದಂಡ ಹಾಕುವುದನ್ನು ನಿಲ್ಲಿಸಿ… ಇದರಿಂದ ಮತ್ತಷ್ಟು ರೋಡ್ ಬ್ಲಾಕಿಗೆ ಕಾರಣ ವಾಗುತ್ತಿದೆ. ರಾತ್ರಿ ಕೆಲಸ ಮಾಡಲು ಅವಕಾಶವಿದ್ದರೆ, ದಯವಿಟ್ಟು ಹಾಗೆ ಮಾಡಿ ಸಹಕರಿಸಿ ಎಂದು ಸಾರ್ವಜನಿಕರು ಹೇಳಿದ್ದಾರೆ.
 
ಎಸ್ ಪಿ ಹೇಳಿದ್ದೇನು ..? ಇದರ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರು ಕಳೆದ 18 ದಿನಗಳಿಂದ ಕನಿಷ್ಠ 7-8 ಜನ ಪೊಲೀಸ್ ಸಿಬಂದಿ ಹಗಲು ರಾತ್ರಿ ಎನ್ನದೆ ಧೂಳಿನಲ್ಲಿ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ನಡೆಯುವಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದಾರೆ. ಕೆಲವೊಮ್ಮೆ ಸಾರ್ವಜನಿಕರು ಕೂಡ ಟ್ರಾಫಿಕ್ ಜಾಮ್ ಆದಾಗ ಮೊದಲು ಬೈಯ್ಯುವುದು ಪೊಲೀಸರನ್ನು. ಆದರೆ ಯಾವುದೇ ಸಂಯಮ ಕಳೆದುಕೊಳ್ಳದೆ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
 
ಉಡುಪಿಯಲ್ಲಿ ಶನಿವಾರ ಸಂಜೆ ಧೀಡಿರ್ ಮಳೆ ಬಂದಿದ್ದು, ಈ ವೇಳೆ ಮಲ್ಪೆ– ಮಣಿಪಾಲ ರಸ್ತೆಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ ಕಾಮಗಾರಿಯಿಂದಾಗಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಯಿತು.
 
ಈ ನಡುವೆ ಮಹಿಳೆಯೋರ್ವರು ನೀರು ತುಂಬಿದ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಹೋಗಲು ಪರದಾಡುತ್ತಿದ್ದಾಗ ಕರ್ತವ್ಯದಲ್ಲಿದ ಮಣಿಪಾಲ ಠಾಣೆಯ ಕಾನ್ ಸ್ಟೇಬಲ್ ಗಳಾದ ಮಂಜುನಾಥ್ ಹಾಗು ಶರಣ ಬಸವ  ಕೂಡಲೇ ಅವರ ನೆರವಿಗೆ ಧಾವಿಸಿ ಮಹಿಳೆಗೆ ಸಹಾಯ ಹಸ್ತ ಚಾಚಿದರು.  ಈ ವಿಡಿಯೋ ಸಕತ್ ವೈರಲ್ ಕೂಡಾ ಆಗಿದೆ. ಜನ ಸಾಮಾನ್ಯರ  ಪ್ರಶಂಸೆಗೂ  ಪಾತ್ರವಾಗಿದೆ.   
 
 
 
 
 
 
 
 
 
 
 

Leave a Reply