ಡೋರ್ ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿದ ಪಾಪಿ ಹಮೀದ್ : ನಾಲ್ವರ ಸಜೀವ ದಹನ!

ವಯೋವೃದ್ಧನೊರ್ವ ಮಗನ ಮನೆಯ ಬಾಗಿಲು ಹೊರಗಿನಿಂದ ಲಾಕ್ ಮಾಡಿ, ಮನೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬೆಚ್ಚಿ ಬೀಳಿಸುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೊಡುಪುಳ ಸಮೀಪದ ಚೆನಿಕುಝಿ ಎಂಬಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ. ಬಾಗಿಲು ಲಾಕ್ ಮಾಡಿದ್ದರಿಂದ ವೃದ್ಧನ ಮಗ, ಸೊಸೆ, ಇಬ್ಬರು ಮೊಮ್ಮಕಳು ಸಜೀವ ದಹನವಾಗಿದ್ದಾರೆ. ಚೀನಿಕ್ಕುಜಿಯ ಅಲಿಯಕ್ಕುನ್ನೆಲ್‌ನ ಹಮೀದ್ (79) ಮಾರಣಹೋಮ ನಡೆಸಿದ ಆರೋಪಿ. ಈತನನ್ನು ಸೆರೆ ಹಿಡಿದಿರುವ ನೆರೆಹೊರೆಯವರು, ಶನಿವಾರ ಬೆಳಗ್ಗೆ ತೊಡುಪುಳ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಮ್ಮದ್ ಫೈಝಲ್ (49), ಅವರ ಪತ್ನಿ ಶೀಬಾ (39), ಪುತ್ರಿಯರಾದ ಮೆಹರು (16) ಮತ್ತು ಅಸ್ನಾ (13) ಮನೆಯೊಳಗೆ ಸಜೀವ ದಹನವಾಗಿದ್ದಾರೆ. ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೊಡುಪುಳ ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಕುಟುಂಬದ ಆಸ್ತಿ ಹಂಚಿಕೊಳ್ಳುವ ವಿವಾದ ಕೊಲೆಗೆ ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೆರೆಹೊರೆಯವರ ಪ್ರಕಾರ, ಹಮೀದ್ ಮನೆಯಲ್ಲಿ ಪೆಟ್ರೋಲ್ ಸಂಗ್ರಹಿಸಿದ್ದ. ರಾತ್ರಿ ಮಗನ ಮನೆ ಬಳಿ ಬಂದ ಹಮೀದ್, ಮನೆಯವರು ಮಲಗಿದ್ದನು ಖಚಿತಪಡಿಸಿಕೊಂಡು, ನಂತರ ಮಗ ಫೈಝಲ್ ಮಲಗುವ ಕೋಣೆಗೆ ಕಿಟಕಿ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಮನೆ ಬೆಂಕಿ ಹೊತ್ತಿ ಉರಿದಿದೆ. ಹಮೀದ್ ಮನೆಯ ಹೊರಗಡೆ ಲಾಕ್ ಮಾಡಿದ್ದರಿಂದ ಹೊರ ಬರಲಾಗದೆ, ನಾಲ್ವರು ಕಣ್ಣ ಮುಂದೆಯೇ ಸಜೀವ ದಹನವಾಗಿದ್ದಾರೆ.

ತನ್ನದೇ ಕುಟುಂಬದವರು ಚೀರಾಡಿ ಪ್ರಾಣ ಬಿಡುವಾಗ ನಿಷ್ಕರುಣಿ ಹಮೀದ್ ಮನೆಯ ಹೊರಗಡೆ ನಿಂತು ಕಾಯುತ್ತಿದ್ದ ಎಂದು ಹೇಳಲಾಗ್ತಿದೆ. ಆರೋಪಿ ಹಮೀದ್ ಮನೆಗೆ ಬೆಂಕಿ ಹಚ್ಚುವ ಮುನ್ನ ಟ್ಯಾಂಕ್ ನಿಂದ ಎಲ್ಲಾ ನೀರು ಖಾಲಿ ಮಾಡಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾಗಿ ತಿಳಿದು ಬಂದಿದೆ.

 
 
 
 
 
 
 
 
 
 
 

Leave a Reply