ಭಾಷೆಯಲ್ಲಿ ಮೇಲು, ಕೀಳು ಎಂಬ ಭಾವನೆ ಸಲ್ಲ~ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ 

ಭಾಷೆಯಲ್ಲಿ ಮೇಲು, ಕೀಳು ಎಂಬ ಭಾವನೆ ಸಲ್ಲ. ನೆರೆಹೊರೆಯ ಭಾಷೆಗಳನ್ನು ಕಲಿಯಬೇಕು. ಭಾಷೆಗಳ ನಡುವೆ ಬಾಂಧವ್ಯ ಬೆಳೆಯಬೇಕು ಎಂದು ಶಿಕ್ಷಣ ತಜ್ಞ ಡಾ ಮಹಾಬಲೇಶ್ವರ ರಾವ್ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ಶನಿವಾರ ಮಣಿಪಾಲ ಸೋನಿಯಾ ಕ್ಲಿನಿಕ್ ಸಭಾಂಗಣದಲ್ಲಿ ಜರಗಿದ ’ಕನ್ನಡ ಮಾತನಾಡು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೆರೆ ಹೊರೆಯವರಿಂದ ಭಾಷೆ ಕೊಡುಕೊಳ್ಳುವಿಕೆಯಾಗಬೇಕು. ಇದು ಹಿಂದಿನಿಂದ ನಡೆದು ಕೊಂಡು ಬಂದಿಲ್ಲ.

ಭಾಷೆಗಳ ಜತೆಗೆ ನೆಲದ ಸಂಸ್ಕೃತಿ ಬಗ್ಗೆಯೂ ಅರಿಯಬೇಕು. ಭಾಷೆ ಒಂದು ಅಂಶವಾಗಿದ್ದು ಸಂಸ್ಕೃತಿಯು ಅದರ ಮೂಲವಾಗಿದೆ. ವ್ಯಾಕರಣದ ಮೂಲಕ ಭಾಷೆಯನ್ನು ಕಲಿಸುವ ಬದಲು ಸಂವಹನ ಮತ್ತು ಸನ್ನಿವೇಶಗಳ ಆಧರಿತವಾಗಿ ಭಾಷೆಯನ್ನು ಕಲಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತ್ ಉಡುಪಿ ತಾಲೂಕು ಘಟಕದಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣ ಎಂದು ಬಣ್ಣಿಸಿದರು.

ಸಾಹಿತಿ ಡಾ. ಗಣನಾಥ ಎಕ್ಕಾರು ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಕೇರಳ ಕಲ್ಚರಲ್ ಸೋಶಿಯಲ್ ಸೆಂಟರ್ ಕಾರ್ಯದರ್ಶಿ ಬಿನೇಶ್ ಹಾಗು ಸದಸ್ಯರಾದ ಮೋಹನ್ ರಾವ್, ಥಾಮಸ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷ ರವಿರಾಜ್ ಹೆಚ್.ಪಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿ, ರಾಜೇಶ್ ಪಣಿಯಾಡಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply