ಕನ್ನಡ ಮಾತನಾಡು ಕಾರ್ಯಕ್ರಮ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಮತ್ತು ಕೇರಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಉಡುಪಿ ಇವರ ಸಹಯೋಗದಲ್ಲಿ ಕನ್ನಡವನ್ನು ಕಲಿಸುವ ‘ಕನ್ನಡ ಮಾತನಾಡು’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

 ಹೊರ ರಾಜ್ಯದಿಂದ ಬಂದ ಕನ್ನಡೇತರ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ ಕನ್ನಡ ಭಾಷೆಯಲ್ಲಿ ಮಾತನಾಡಲು, ಕನ್ನಡ ಲಿಪಿಯನ್ನು ಬರೆಯಲು ಹಾಗೂ ಓದಲು ಕಲಿಸುವ ಈ ಯೋಜನೆಯು ಹಿರಿಯ ಸಾಹಿತಿ ಡಾ. ಗಣನಾಥ್ ಎಕ್ಕಾರ್ ಅವರ ನೇತೃತ್ವದಲ್ಲಿ ನಡೆಯಲಿದೆ. ಡಾ. ನಿಕೇತನ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ರೇವತಿ ನಾಡಿಗೇರ್ , ಶಾಲಿಕಾ ಹಾಗೂ ಇನ್ನಿತರರು ಸಂಪನ್ಮೂಲ ವ್ಯಕ್ತಿಗಳಾಗಿದ್ದು, ಕನ್ನಡ ಕಲಿಸುವ ಈ ಅಭಿಯಾನವನ್ನು ಇದೇ ಬರುವ ಶನಿವಾರ ಜನವರಿ 28ರಂದು ಸಂಜೆ 6 ಗಂಟೆಗೆ ಹಿರಿಯ ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್ ಅವರು ಮಣಿಪಾಲ ಸೋನಿಯಾ ಕ್ಲಿನಿಕ್ಕಿನ ಎರಡನೇ ಮಹಡಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಉದ್ಘಾಟಿಸಲಿದ್ದಾರೆ.

 ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಹೆಚ್ ಪಿ , ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಕೇರಳ ಕಲ್ಚರಲ್ ಮತ್ತು ಸೋಶಿಯಲ್ ಸೆಂಟರ್ ಇದರ ಅಧ್ಯಕ್ಷರಾದ ಸುಗುಣ ಕುಮಾರ್ , ಕಸಾಪ ಉಡುಪಿ ತಾಲೂಕಿನ ಗೌರವ ಕಾರ್ಯದರ್ಶಿಗಳಾದ ಜನಾರ್ಧನ್ ಕೊಡವೂರು ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್. ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply