Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಮಹಾರಾಷ್ಟ್ರ ಸರ್ಕಾರ​ಕ್ಕೆ ಕಂಗನಾ​ ​ಕ್ಲಾಸ್ 

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನಕ್ಕೆ ನಟಿ ಕಂಗನಾ ರನೌತ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.​ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಂಗನಾ ಮಾತನಾಡಿದ್ದು, ನಾನು ಮಹಾರಾಷ್ಟ್ರ ಸರ್ಕಾರ​ಕ್ಕೆ ಕೆಲವು ಪ್ರಶ್ನೆ ಕೇಳುತ್ತಿದ್ದೇನೆ. ಇಂದು ನೀವು ಅರ್ನಬ್ ಗೋಸ್ವಾಮಿ ಅವರನ್ನು ಅರೆಸ್ಟ್ ಮಾಡಿದ್ದೀರಿ. ಅವರಿಗೆ ದೈಹಿಕವಾಗಿ ಹಿಂಸೆ ನೀಡಿದ್ದೀರಿ, ಅವರ ಕೂದಲು ಹಿಡಿದು ಎಳೆದಿದ್ದೀರಿ. ಇನ್ನೂ ಎಷ್ಟು ಜನರಿಗೆ ಹೀಗೆ ಮಾಡಬೇಕು ​ಅಂದು  ಕೊಂಡಿದ್ದೀರಿ​. ಹೀಗೆ ಎಷ್ಟು ಜನರ ಧ್ವನಿ ಅಡಗಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ಸೋನಿಯಾ ಸೇನೆ ಇನ್ನೆಷ್ಟು ಜನರ ಬಾಯಿ ಮುಚ್ಚಿಸುವ ಯತ್ನ ಮಾಡಲಿದೆ. ಹೀಗೆ ಒಬ್ಬರ ಬಾಯಿ ಮುಚ್ಚಿಸಿದರೆ ನೂರು ಜನ ಮಾತನಾಡುತ್ತಾರೆ. ಜನರ ಬಾಯಿ ಮುಚ್ಚಿಸು​ ​ವುದರಿಂದ ಏನೂ ಆಗುವುದಿಲ್ಲ. ಅಷ್ಟಕ್ಕೂ ನಿಮಗೆ ಇಷ್ಟೊಂದು ಸಿಟ್ಟೇಕೆ? ಪಪ್ಪು ಸೇನಾ,​ ​ಸೋನಿಯಾ ಸೇನಾ ಎಂದರೆ ನಿಮಗೆ ಸಿಟ್ಟು ಬರುತ್ತದೆ ಆದರೆ ಅದೇ ಸತ್ಯ ಎಂದಿದ್ದಾರೆ. ಸರಿಯಾಗಿ ಮಾತನಾಡಿದ ಎಷ್ಟೋ ಜನರ ಬಾಯಿ ಮುಚ್ಚಿಸಲು ನೀವು ಮಾಡಿರುವ ಪ್ರಯತ್ನಗಳೆಲ್ಲವೂ ವ್ಯರ್ಥ ಎಂದಿದ್ದಾರೆ. ​ಇದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದರು ​​​ ​​
 
 
 
 
 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!