Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ವೈದ್ಯಕೀಯ ಪದವಿ ಹೊಂದಿರದೆ ಡೆಂಟಲ್ ಕ್ಲಿನಿಕ್ & ಲ್ಯಾಬ್ –ನಗರ​ ​ಠಾಣೆಯಲ್ಲಿ ​ ​ ​ಪ್ರಕರಣ ದಾಖಲು

ಉಡುಪಿ: ವೈದ್ಯಕೀಯ ಪದವಿ ಹೊಂದಿರದೆ ಡೆಂಟಲ್ ಕ್ಲಿನಿಕ್ & ಲ್ಯಾಬ್ – ನಗರ​ ​ಠಾಣೆಯಲ್ಲಿ ​ ​ ಪ್ರಕರಣ ದಾಖಲು

ಉಡುಪಿ: ಯಾವುದೇ ವೈದ್ಯಕೀಯ ಪದವಿ ಹೊಂದಿರದೆ ಡೆಂಟಲ್ ಕ್ಲಿನಿಕ್ & ಲ್ಯಾಬ್ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.​ ಉಡುಪಿಯ ಶ್ವೇತಾ ಎಂಬವರು ಸಿಟಿ ಬಸ್ ನಿಲ್ದಾಣದ ಬಳಿ ಶಾಶ್ವತ್ ಡೆಂಟಲ್ ಕ್ಲಿನಿಕ್ & ಲ್ಯಾಬ್ ಹೆಸರಿನ ವೈದ್ಯಕೀಯ ಸಂಸ್ಥೆಯನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ನವೀಕರಣವನ್ನು ಮಾಡಿದ್ದು,  ಶ್ವೇತಾ ಅವರು ಕ್ಲಿನಿಕ್ನ್ನು ನಡೆಸದೆ, ಯಾವುದೇ ವೈದ್ಯಕೀಯ ಪದವಿ ಹೊಂದಿರದ​ ಗೋವಿಂದ ಭಂಡಾರಿ ಇವರು ನಕಲಿ ದಂತ ವೈದ್ಯನಾಗಿ ಸದ್ರಿ​ ​​ಕ್ಲಿನಿಕ್ ನಡೆಸುತ್ತಿದ್ದು ​ಅಕ್ಟೋಬರ್ 21ರಂದು ಅರೋಗ್ಯ ಇಲಾಖೆ ಶಾಶ್ವತ್ ಡೆಂಟಲ್ ಕ್ಲಿನಿಕ್ ​ನ್ನು ಸೀಲ್ ಮಾ​ಡಿರುತ್ತಾರೆ.  ​

ಅರೋಪಿತರು ಸಮಾನ ಉದ್ದೇಶದಿಂದ ಸಾರ್ವಜನಿಕರ​​ನ್ನು ವಂಚಿಸಿ ಅರೋಗ್ಯ ಇಲಾಖೆ ಮತ್ತು ಸಾರ್ವಜನಿಕರಿಗೆ ಅಪರಾಧಿಕ ನಂಬಿಕೆ ದ್ರೋಹ ವೆಸಗಿ, ವಂಚನೆ ಮಾಡಿರುತ್ತಾರೆ, ಎಂಬುದಾಗಿ ಡಾ|| ನಾಗರತ್ನ ತಾಲೂಕು ಆರೋಗ್ಯ ಅಧಿಕಾರಿ, ಉಡುಪಿ ಇವರು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.​ ಈ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!