Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಕನ್ನಡ ಜಾನಪದ ಪರಿಷತ್ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ದೇವದಾಸ್ ನೇಮಕ

ಕನ್ನಡ ಜಾನಪದ ಪರಿಷತ್ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಎಸ್. ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ದೇವದಾಸ್ ನೇಮಕವಾಗಿದ್ದಾರೆ.

ಕಾರ್ಕಳ ತಾಲೂಕು ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಮಂಜುನಾಥ ಕೆ. ಶಿವಪುರ, ಕೋಶಾಧಿಕಾರಿ ಪ್ರತಿಭಾ ಕೊಕ್ಕರ್ಣೆ, ಜಂಟಿ ಕಾರ್ಯದರ್ಶಿ ವಸಂತಿ ಕಾಡಂಬಳ, ಪತ್ರಿಕಾ ಕಾರ್ಯದರ್ಶಿ ಹರಿಪ್ರಸಾದ್ ನಂದಳಿಕೆ, ಸಂಘಟನಾ ಕಾರ್ಯದರ್ಶಿ ಅಶೋಕ್ ಶೆಟ್ಟಿ ಮಾಳ, ಸಂಚಾಲಕ ಚಂದ್ರನಾಥ ಬಜಗೋಳಿ, ಸದಸ್ಯರಾಗಿ ಗಣೇಶ್ ಜಾಲ್ಸೂರು, ಶಿವಸುಬ್ರಹ್ಮಣ್ಯ ಜಿ ಭಟ್, ದಿನೇಶ್ ಶೆಟ್ಟಿ, ಸುರೇಶ್ ನಿಟ್ಟೆ.

ವಂದನಾ ರೈ, ಕು.ಸುಷ್ಮಾ ಎಸ್. ಪೂಜಾರಿ ಇವರನ್ನು ಕನ್ನಡ ಜಾನಪದ ಪರಿಷತ್, ಬೆಂಗಳೂರು ಇದರ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅವರು ಹಾಗೂ ಕರಾವಳಿ ಜಿಲ್ಲೆಗಳ ವಿಭಾಗಿಯ ಸಂಚಾಲಕರಾದ
ಡಾ. ಭಾರತಿ ಮರವಂತೆ ಆಯ್ಕೆ ಮಾಡಿರುತ್ತಾರೆ ಎಂದು ಕನ್ನಡ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!