ಸದ್ಗುರು ಜಿ ರವರ ಮಣ್ಣು ಉಳಿಸಿ ಅಭಿಯಾನಕ್ಕೆ ಸಂಪೂರ್ಣ ಬೆಂಬಲ~ ಸಿಎಂ

ಏಪ್ರಿಲ್ 12 :  ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಮಣ್ಣು ಉಳಿಸಿ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸದರು! ಮಣ್ಣು ಉಳಿಸಿ ಅಭಿಯಾನಕ್ಕೆ ಕರ್ನಾಟಕದಲ್ಲಿ ಉಡುಪಿಯ ಮಣಿಪಾಲ್ ನಿಂದ ಮುಖ್ಯಮಂತ್ರಿಗಳಿಂದ ಚಾಲನೆ ದೊರೆಯಿತು.

  

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಬಸವರಾಜ್ ಬೊಮ್ಮಾಯಿ ಅವರು ಇಂದು ಬೆಳಿಗ್ಗೆ ಉಡುಪಿ ಜಿಲ್ಲೆಯ ಮಣಿಪಾಲ್ ನಲ್ಲಿ “ಮಣ್ಣು ಉಳಿಸಿ” ಅಭಿಯಾನದ ಪರವಾಗಿ ಕರ್ನಾಟಕ ಸರ್ಕಾರದ ಸಂಪೂರ್ಣ ಬೆಂಬಲವಿದೆ ಎಂದು ಹೇಳುತ್ತಾ ಅಭಿಯಾನಕ್ಕೆ ಕರ್ನಾಟಕದಲ್ಲಿ ಚಾಲನೆಯನ್ನು ನೀಡಿದರು.

ಮಾರ್ಚ್ 21 ರಂದು ಅಭಿಯಾನವನ್ನು ಲಂಡನ್, ಯುನೈಟೆಡ್ ಕಿಂಗ್ಡಮ್ ನಿಂದ ಪ್ರಾರಂಭಿಸಿದ ಸದ್ಗುರುಗಳ ಬೈಕ್ ಪ್ರಯಾಣವು ಫ್ರಾನ್ಸ್‌ಗೆ ಪ್ರವೇಶಿಸುವ ಮೊದಲು ನೆದರ್‌ಲ್ಯಾಂಡ್ಸ್, ಜರ್ಮನಿ, ಜೆಕ್ ರಿಪಬ್ಲಿಕ್, ಆಸ್ಟ್ರಿಯಾ, ಸ್ಲೊವೇನಿಯಾ, ಇಟಲಿ ಮತ್ತು ಸ್ವಿಟ್ಜರ್‌ಲ್ಯಾಂಡ್ ಮೂಲಕ ಹಾದು ಹೋಗಿದೆ. ಇಂದು ಅಭಿಯಾನದ 18ನೆೇ ದಿನವಾಗಿದ್ದು, ಸದ್ಗುರುಗಳು ಬೆಲ್ಜಿಯಂ ದೇಶದ ಬ್ರಸೆಲ್ಸ್‌ಗೆ ತೆರಳಲಿದ್ದಾರೆ.

ಸದ್ಗುರು ಜಿ ಗೆ ನನ್ನ ನಮಸ್ಕಾರಗಳನ್ನ ಹೇಳಿ.   ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಎಲ್ಲ ತಾಲೂಕು, ಎಲ್ಲ ಜಿಲ್ಲೆಯಲ್ಲು ಮಾಡಬೇಕು.  ಏಕೆಂದರೆ ಮಣ್ಣು ಉಳಿದರೆ ಮನುಷ್ಯ ಉಳಿತಾನೆ! ಇಡೀ ಬದುಕು ಇರೋದೇ ತಾಯಿ ಗರ್ಭದಿಂದ ಭೂ ಗರ್ಬದ ವರೆಗೆ.

ಹೀಗಾಗಿ ಈ ತಾಯಿ ಗರ್ಭದಿಂದ ಭೂ ಗರ್ಭದ ಪ್ರಯಾಣ ಸುಖಕರವಾಗಬೇಕಾದರೆ ಮಣ್ಣು ಮತ್ತು ಅದರ ಸತ್ವವನ್ನ ಉಳಿಸುವ ನೈತಿಕ ಹಾಗು ಅತ್ಯಂತ ಅವಶ್ಯವಾಗಿರುವ ಜವಾಬ್ದಾರಿ ಎಲ್ಲ ಮನುಜರ ಮೇಲೆ ಇದೆ” – ಎಂದು ಮುಖ್ಯಮಂತ್ರಿ ಶ್ರೀ ಬೊಮ್ಮಾಯಿ ಅವರು ಚಾಲನೆ ನೀಡುವ ಸಂದರ್ಭದಲ್ಲಿ ಹೇಳಿದರು. 

ಕಾರ್ಯಕ್ರಮದಲ್ಲಿ ಇಂಧನ ಸಚಿವ ಶ್ರೀ ಸುನಿಲ್ ಕಾರ್ಕಳ ಹಾಗು ಶಾಸಕ ರಘುಪತಿ ಭಟ್ ಅವರು ಉಪಸ್ಥಿತರಿದ್ದರು. ಸುಮಾರು 150 ಸ್ಥಳೀಯರು ಮತ್ತು ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕರು ಸಂತಸದಿಂದ ಅಭಿಯಾನದ ಚಾಲನೆಯಲ್ಲಿ ಭಾಗಿಯಾಗಿದ್ದರು.

 
 
 
 
 
 
 
 
 
 
 

Leave a Reply