ಸಂಭ್ರಮದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಹರಸಿದ ಪುತ್ತಿಗೇಶ್ರೀ

ಅಮೆರಿಕಾದ ಹೂಸ್ಟನ್ ಮಹಾನಗರದ ಶ್ರೀ ಪುತ್ತಿಗೆ ಮಠದ ಶ್ರೀ ಕೃಷ್ಣ ವೃಂದಾವನದಲ್ಲಿ 12 ನೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಪೂಜ್ಯ ಪುತ್ತಿಗೆ ಶ್ರೀಪಾದರು.

ಪೂಜ್ಯ ಶ್ರೀಪಾದರು ವಿಶ್ವಾದ್ಯಂತ ಸಂಚರಿಸಿ ಸನಾತನ ಹಿಂದೂಧರ್ಮ ಪ್ರಚಾರದ ಜೊತೆಗೆ ಶ್ರೀಕೃಷ್ಣ ಭಕ್ತಿ ಪ್ರಸಾರಕ್ಕಾಗಿ ಅಲ್ಲಲ್ಲಿ ಸ್ಥಾಪಿಸಿರುವ ಶ್ರೀಮಠಗಳಲ್ಲಿ ಹೂಸ್ಟನ್ ನಲ್ಲಿರುವ ಮಠ 4 ನೆಯ ಮಠವಾಗಿ,2011 ರಲ್ಲಿ ಸ್ಥಾಪನೆಯಾಗಿದೆ.

ತತ್ಸಂಬಂಧವಾಗಿ ಇಂದು ನಡೆದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಮುಂಜಾನೆ ಶ್ರೀಕೃಷ್ಣದೇವರಿಗೆ 108 ಪ್ರಸನ್ನ ಕಲಶಾಭಿಷೇಕ ಪೂಜಾ ನಡೆಯಿತು. ತದನಂತರ ನೆರೆದ ಭಕ್ತರಿಗೆ ಮುದ್ರಾಧಾರಣೆ ನಡೆಯಿತು.

ಸಾಯಂಕಾಲ ಗೋಧೂಳಿ ಲಗ್ನದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣಮಹೋತ್ಸವ ನಡೆಯಿತು.

ಉಡುಪಿಯ ಕಡೆಯ ಭ್ಸಕ್ತರು ಹುಲಿವೇಷ ಧಾರಿಗಳಾಗಿ ಹುಲಿವೇಷ ಕುಣಿತದೊಂದಿಗೆ ಕಾರ್ಯಕ್ರಮದಮೆರಗನ್ನು ಹೆಚ್ಚಿಸಿದರು .

ಪೂಜ್ಯ ಶ್ರೀಪಾದರು ರಾತ್ರಿ ಪೂಜೆ ಬಳಿಕ ತುಳಸೀಪೂಜೆಯನ್ನು ನೆರವೇರಿಸಿದರು .

ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಭಕ್ತರಿಂದ ನಡೆದ ತುಳಸೀಸಂಕೀರ್ತನೆ ಕಾರ್ಯಕ್ರಮ ಭಾರತೀಯ ಸಂಸ್ಕೃತಿಯ ಪ್ರತಿರೂಪ ದಂತೆ ಅತ್ಯಂತ ಶೋಭಾಯಮಾನವಾಗಿತ್ತು .

ಪೂಜ್ಯ ಶ್ರೀಪಾದರು ಎಲ್ಲರನ್ನು ಹರಸಿ ತಮ್ಮ ಚತುರ್ಥ ಪರ್ಯಾಯಕ್ಕೆ ಆಮಂತ್ರಿಸಿದರು . ಎಲ್ಲರಿಗೂ ಭಗವದ್ಗೀತೆ ಬರೆಯುವ ದೀಕ್ಷೆಯನ್ನು ನೀಡಿದರು .

Leave a Reply