ಹುಬ್ಬಳ್ಳಿ: ಪ್ರಧಾನಿ ರೋಡ್ ಶೋ ವೇಳೆ ಭದ್ರತಾ ಲೋಪ

ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದು ತಮ್ಮ ಪ್ರಯತ್ನ ಮತ್ತು ಜವಾಬ್ದಾರಿಗಳ ಮೂಲಕ ಅಮೃತ ಕಾಲದ ಸಮಯದಲ್ಲಿ ಭಾರತವನ್ನು ಮುಂದಕ್ಕೆ ಕೊಂಡೊಯ್ಯುವುದು ಭಾರತೀಯ ಯುವಕರ ಮಂತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

26 ನೇ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆ ನಡೆಸಿ ಮಾತನಾಡಿ, 2023 ರ ರಾಷ್ಟ್ರೀಯ ಯುವ ದಿನದ ಈ ದಿನ ಬಹಳ ವಿಶೇಷವಾಗಿದೆ. ಒಂದೆಡೆ ಈ ಶಕ್ತಿ ಹಬ್ಬ ಮತ್ತೊಂದೆಡೆ ಸ್ವಾತಂತ್ರ್ಯದ ಅಮೃತ ಮಹೋತ್ಸವ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ವಿವೇಕಾನಂದರ ಈ ಘೋಷಣೆಯು ಭಾರತದ ಯುವಜನತೆಯ ಜೀವನ ಮಂತ್ರವಾಗಿದೆ ಎಂದರು.

ಇದು ಭಾರತದ ಶತಮಾನ, ನಿಮ್ಮ ಶತಮಾನ, ಭಾರತದ ಯುವಕರ ಶತಮಾನ ಎಂದು ಜಾಗತಿಕ ಧ್ವನಿಗಳು ಹೇಳುತ್ತವೆ. ಜಾಗತಿಕ ಸಮೀಕ್ಷೆಗಳು ಹೇಳುವಂತೆ ಬಹುಪಾಲು ದೊಡ್ಡ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ ಮತ್ತು ಈ ಹೂಡಿಕೆದಾರರು ಭಾರತದ ಯುವಜನತೆಯಲ್ಲಿ ನಿಮ್ಮಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಎಂದರು.

ಇದು ಇತಿಹಾಸದಲ್ಲಿ ಒಂದು ವಿಶೇಷ ಸಮಯ ಮತ್ತು ನೀವು ಜಾಗತಿಕ ದೃಶ್ಯದಲ್ಲಿ ಭಾರತದ ಮೇಲೆ ಪ್ರಭಾವ ಬೀರುವ ವಿಶೇಷ ಧ್ಯೇಯವನ್ನು ಹೊಂದಿರುವ ವಿಶೇಷ ಪೀಳಿಗೆಯಿಂದ ಬಂದವರು. ರನ್‌ವೇ ನಿಮ್ಮ ಟೇಕ್-ಆಫ್‌ಗೆ ಸಿದ್ಧವಾಗಿದೆ. ಇಂದು ಭಾರತ ಮತ್ತು ಅದರ ಯುವಜನತೆಯ ಕಡೆಗೆ ಪ್ರಪಂಚದಲ್ಲಿ ಉತ್ತಮ ಆಶಾವಾದವಿದೆ ಎಂದರು.

ಯುವ ಜನತೆಗೆ ಸ್ವಾಮೀ ವಿವೇಕಾನಂದ ಜಿ ಅವರ ಪ್ರೇರಣೆ ಇದೆ.ಸ್ವಾಮಿ ವಿವೇಕಾನಂದರು ಹುಬ್ಬಳ್ಳಿ , ಧಾರಾವಾಡಕ್ಕೂ ಬಂದಿದ್ದರು. ಕರ್ನಾಟಕದೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದರು.ಈ ಯಾತ್ರೆಯ ವೇಳೆ ಅವರ ಜೀವನಕ್ಕೆ ಹೊಸ ದಿಕ್ಕು ದೊರಕಿತು. ವಿವೇಕಾನಂದರಿಗೆ ಮೈಸೂರು ಮಾಹಾರಾಜರು ಚಿಕಾಗೊ ಯಾತ್ರೆಗೆ ನೆರವಾಗಿದ್ದರು ಎಂದರು.

ಏಕ ಭಾರತ ಶ್ರೇಷ್ಠ ಭಾರತ ಒಂದು ಉದಾಹರಣೆ. ದೇಶ ಹೊಸ ಸಂಕಲ್ಪಗಳೊಂದಿಗೆ ಮುಂದಕ್ಕೆ ಸಾಗುತ್ತಿದೆ. ಯುವ ಶಕ್ತಿ ಮೂಲಕ ಭವಿಷ್ಯದ ರಾಷ್ಟ್ರದ ನಿರ್ಮಾಣ ಸುಲಭ ಎಂದರು. ಕಿತ್ತೊರಿನ ರಾಣಿ ಚನ್ನಮ್ಮ ದೇಶದ ಅಗ್ರಗಣ್ಯ ಮಹಿಳಾ ಸ್ವಾತಂತ್ರ್ಯ ಸೇನಾನಿ ಯಾಗಿದ್ದರು. ಅವರ ಸೇನೆಯಲ್ಲಿ ಸಂಗೊಳ್ಳಿ ರಾಯಣ್ಣ ಕೂಡ ವೀರ ಸೇನಾನಿಯಾಗಿದ್ದರು ಎಂದರು.

ಮೂರು ಸಾವಿರ ಮಠ, ಸಿದ್ದಾರೂಢ ಮಠ ನೆನಪಿಸಿಕೊಂಡು, ಮಹಾನ್ ಸಂಗೀತಕಾರರಾದ ಪಂಡಿತ್ ಕುಮಾರ್ ಗಂಧರ್ವ, ಮಲ್ಲಿಕಾರ್ಜುನ ಮನ್ಸೂರ್ , ಭೀಮ್ ಸೇನ್ ಜೋಶಿ, ಗಂಗೂ ಬಾಯಿ ಹಾನಗಲ್ ಅವರನ್ನು ನೆನಪಿಸಿದರು. ಸಿದ್ದೇಶ್ವರ ಸ್ವಾಮೀಜಿ ಅವರಿಗೂ ನಾನು ಶ್ರದ್ದಾಂಜಲಿ ಅರ್ಪಿಸುತ್ತೇನೆ ಎಂದರು.

ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದು ಎಂದರು. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಕನ್ನಡದಲ್ಲೇ ಹೇಳಲು ಪ್ರಯತ್ನಿಸಿದರು.

ದೇಶದ ವಿವಿಧ ಭಾಗಗಳಲ್ಲಿ ನಮ್ಮ ಯುವಕರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ನಂಬಲಾಗದ ಉದಾಹರಣೆಗಳಿವೆ.ಇಂದಿಗೂ ವಿಶ್ವ ವೇದಿಕೆಗಳಲ್ಲಿ ಗಣಿತದಿಂದ ವಿಜ್ಞಾನದವರೆಗೆ ಸ್ಪರ್ಧೆಗಳು ನಡೆದಾಗ ಭಾರತೀಯ ಯುವಕರ ಸಾಮರ್ಥ್ಯ ಜಗತ್ತನ್ನೇ ಬೆರಗುಗೊಳಿಸುತ್ತದೆ ಎಂದರು.

ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ರಸ್ತೆಯಲ್ಲಿ ಅಪರಿಚಿತ ಕಾರು ನಿಂತಿದ್ದು, ಆತಂಕ ಸೃಷ್ಟಿಯಾಗಿತ್ತು. ಅನುಮಾನಗೊಂಡ ಸಂಚಾರಿ ಪೊಲೀಸರು ಕಾರನ್ನು ಜಪ್ತಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಸಂಚರಿಸುವ ರಸ್ತೆಯಲ್ಲಿ ಸಾರ್ವಜನಿಕ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆದರೆ, ಎರಡು ದಿನಗಳಿಂದ ನಗರದ ಹೊಸೂರ್ ಕ್ರಾಸ್‌ನಲ್ಲಿ ನಿಂತಿರುವ ಅಪರಿಚಿತ, ಮಹಾರಾಷ್ಟ್ರದ MH10 CA6984 ನೋಂದಣಿ ಸಂಖ್ಯೆ ಹೊಂದಿರುವ ವೋಲ್ಕ್ಸ್ ವ್ಯಾಗನ್ ಕಂಪನಿಯ ವೆಂಟೋ ಕಾರ್‌ ಅನ್ನು ಕಾಟನ್ ಮಾರ್ಕೆಟ್ ಸಂಚಾರಿ ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು, ಹುಬ್ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

ಹೌದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೋದಿ ಭರ್ಜರಿ ರೋಡ್ ಶೋ ನಡೆಸಿ ಅಭಿಮಾನಿತಗಳತ್ತ ಕೈ ಬೀಸಿ ಮೆರವಣಿಗೆ ನಡೆಸುತ್ತಿದ್ದ ವೇಳೆ ಭದ್ರತಾ ಲೋಪವಾಗಿದೆ. ಬ್ಯಾರಿಕೇಡ್​ ಹಾರಿ ಮೋದಿ ಕಾರಿನತ್ತ ನುಗ್ಗಿದ ಬಾಲಕ ಮೋದಿಗೆ ಹೂವಿನ ಹಾರ ಹಾಕಲು ಯತ್ನಿಸಿದ್ದಾನೆ. ಇದನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿಯವರು ಬಾಲಕನ ಕೈಯಲ್ಲಿದ್ದ ಹೂವಿನ ಹಾರ ತೆಗೆದುಕೊಂಡು ತಮ್ಮ ಭದ್ರತಾ ಸಿಬ್ಬಂದಿ ಕೈ ಗೆ ನೀಡಿದ್ದಾರೆ.

ಇನ್ನೂ ಖುದ್ದು ಮೋದಿ ಕೈಗೆ ಹೂವಿನ ಹಾರ ಕೊಡಲು ಯತ್ನಿಸಿದ್ದ ಎನ್ನಲಾಗಿದೆ. ಬಳಿಕ ಭದ್ರತಾ ಸಿಬ್ಬಂದಿ ಹಾಗೂ ನಿಯೋಜಿತ ಪೊಲೀಸ್ ಸಿಬ್ಬಂದಿ ಬಾಲಕನ್ನು ಎಳೆದೊಯ್ದಿದ್ದಾರೆ. ಪೊಲೀಸರ ಕರ್ತವ್ಯ ಲೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ ರೋಡ್ ಶೋ ವೇಳೆ ಹೂ ಹಾರ ಹಾಕಲು ಓಡಿ ಬಾಲಕನ ಬಳಿ ಮಾಹಿತಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ರೋಡ್ ಶೋ ಬಳಿಕ ಹತ್ತು ವರ್ಷದ ಬಾಲಕನ ಪೋಷಕರನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎಸ್‌ಪಿಜಿ ಮತ್ತು ಪೊಲೀಸ್‌ ಬಿಗಿ ಭದ್ರತೆ ನಡುವೆಯು ರೋಡ್ ಶೋ ವೇಳೆ ಭದ್ರತಾ ಲೋಪ ನಡೆದಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

 
 
 
 
 
 
 
 
 
 
 

Leave a Reply