ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ  ವಿಶಿಷ್ಟವಾಗಿ ದೀಪಾವಳಿ ಕಾರ್ಯಕ್ರಮ

ಉಡುಪಿ :- ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ವಿಶಿಷ್ಟವಾಗಿ ದೀಪಾವಳಿ ಕಾರ್ಯಕ್ರಮ ನ.2ರಂದು ಕೊಳಲಗಿರಿ ಸಂತೆ ಮೈದಾನದಲ್ಲಿ ನಡೆಯಿತು.  ಕಾಯ೯ಕ್ರಮದಲ್ಲಿ ಬಡ ವಿದ್ಯಾಥಿ೯ಗಳಿಗೆ ವಿದ್ಯಾಥಿ೯ ವೇತನ ಸೇರಿದಂತೆ , ಅಕ್ಕಿ ಮತ್ತು ಜಿನಸು ಸಾಮಾಗ್ರಿ ವಿತರಣೆ, ಬಡ ರೋಗಿಗಳಿಗೆ ಆಥಿ೯ಕ ನೆರವು ಹಾಗೂ ವಿವಿಧ ಹೊಸ ಯೋಜನೆಗಳ ಚಾಲನೆ ನೀಡಲಾಯಿತು.
ಈ ಸಂದಭ೯ದಲ್ಲಿ ಹುಮಾನಿಟಿ ಟ್ರಸ್ಟ್ ಪ್ರಮುಖರಾದ ರೋಶನ್ ಬೆಲ್ಮನ್ ರವರನ್ನು ಸನ್ಮಾನಿಸಲಾಯಿತು.ಶಾರದ ಅಂಧ ಕಲಾವಿದ ತಂಡದಿಂದ ಸಂಗೀತ ಕಾಯ೯ಕ್ರಮ ನಡೆಯಿತು. ಕಾಯ೯ಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಡಾI ಶಶಿಕಿರಣ್ ಶೆಟ್ಟಿ, ಡಾI ಸುಮಾ ಶೆಟ್ಟಿ, ಬಂಗಾರಪ್ಪ, ರಾಘವೇಂದ್ರ ಪೂಜಾರಿ ಮತ್ತು ಸದಸ್ಯರು ಭಾಗವಹಿಸಿದ್ದರು.
 
 
 
 
 
 
 
 
 
 
 

Leave a Reply