ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅವಕಾಶ ನೀಡುವುದಿಲ್ಲ – ಕೇರಳ ಸರಕಾರ ಆದೇಶ

ಕೇರಳದಲ್ಲಿ ವಿದ್ಯಾರ್ಥಿನಿಯರಿಗೆ ಹಿಜಬ್‌ಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೇರಳ ಸರಕಾರ ಆದೇಶ ನೀಡಿದೆ. ಕೇರಳದ 8 ನೇ ತರಗತಿ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯೋರ್ವಳು ಸ್ಟೂಡೆಂಟ್ ಪೊಲೀಸ್ ಯೋಜನೆಯಲ್ಲಿರುವ ಸಮವಸ್ತ್ರದಲ್ಲಿ ಹಿಜಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಳು.
ಮುಸ್ಲಿಂ ಧರ್ಮದ ಪ್ರಕಾರ ತಲೆಗೆ ಸ್ಕಾರ್ಫ್ ಮತ್ತು ಫುಲ್ ಸ್ಲೀವ್ ಡ್ರೆಸ್ ಧರಿಸಲು ಅನುಮತಿ ಇಲ್ಲ ಎಂದು ಅಧ್ಯಾಪಕರು ತಿಳಿಸಿದ್ದರಿಂದಾಗಿ ಆ ವಿದ್ಯಾರ್ಥಿಯ ಪರವಾಗಿ ಕೋರ್ಟ್‌ಗೆ ಮೊರೆ ಹೋಗಲಾಗಿತ್ತು. ಆದರೆ ಈ ಅರ್ಜಿಯನ್ನು ಕೇರಳ ಕೋರ್ಟ್ ವಜಾಗೊಳಿಸಿ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.
ಈ ಮನವಿಯನ್ನು ಪುರಸ್ಕರಿಸಿದರೆ ಜಾತ್ಯಾತೀತ ನಿಲುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ನೀಡಿದ ಸರಕಾರ ಈ ಮನವಿಗೆ ಪುರಸ್ಕಾರ ನೀಡಿಲ್ಲ. ಸ್ಟೂಡೆಂಟ್ ಕೆಡೆಟ್ ಯೋಜನೆಯ ಸಮವಸ್ತ್ರ್ತದಲ್ಲಿ ಪ್ರತ್ಯೇಕತೆ ತರುವುದು ಸರಿಯಲ್ಲ. ಈ ನಿಲುವಿಗೆ ಬದ್ದರಾಗದವರು ಎಸ್‌ಪಿಸಿಯನ್ನು ಸೇರಬಾರದು ಎಂದು ಆದೇಶದಲ್ಲಿ ತಿಳಿಸಿದೆ.
 
 
 
 
 
 
 
 
 
 
 

Leave a Reply