ವಿದ್ಯಾವಿಕಾಸ ಮತ್ತು ಬುನಾದಿ ಶಿಕ್ಷಣ ತರಬೇತಿ ಕಾರ್ಯಾಗಾರದ ಪೂರ್ವ ಸಿದ್ಧಾತಾ ಬೈಠಕ್

ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ವಿದ್ಯಾಲಯ ಹೆಬ್ರಿ ಇಲ್ಲಿ ವಿದ್ಯಾವಿಕಾಸ ಮತ್ತು ಬುನಾದಿ ಶಿಕ್ಷಣ ತರಬೇತಿ ಕಾರ್ಯಾಗಾರದ ಪೂರ್ವ ಸಿದ್ಧಾತಾ ಬೈಠಕ್ ನಡೆಯಿತು. ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ಶ್ರೀ ವಸಂತ ಮಾಧವ ಕಾರ್ಯದರ್ಶಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಇವರ ಉಪಸ್ಥಿತಿಯಲ್ಲಿ ನಡೆಯಿತು.
ವಿದ್ಯಾಭಾರತಿ ಕರ್ನಾಟಕ ಪ್ರಾಂತ ಆಯೋಜಿಸುವ ವಿದ್ಯಾವಿಕಾಸ ಮತ್ತು ಬುನಾದಿ ಶಿಕ್ಷಣ
ಶಿಕ್ಷಕರ ಪ್ರಶಿಕ್ಷಣ ಕಾರ್ಯಾಗಾರ ಈ ಶೈಕ್ಷಣಿಕ ವರ್ಷ ಉಡುಪಿ ಜಿಲ್ಲೆಯಲ್ಲಿ ಮಾಡಲಾಗುವುದು.ಪ್ರಶಿಕ್ಷಣ ಕಾರ್ಯಾಗಾರ ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ವಿದ್ಯಾಲಯ ಹೆಬ್ರಿಯಲ್ಲಿ ನಡೆಯುವುದು. ಏಪ್ರಿಲ್ 17 ರಿಂದ ಏಪ್ರಿಲ್ 27 ರ ವರೆಗೆ ಸನಿವಾಸ ಕಾರ್ಯಾಗಾರ ನಡೆಯಲಿದೆ.ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜನೆ ಗೊಂಡ ಸಂಸ್ಥೆಯ ಶಿಕ್ಷಕರು ಇದರಲ್ಲಿ ಭಾಗವಹಿಸುವರು. ಶಿಕ್ಷಕರ ವ್ಯಕ್ತಿತ್ವ ವಿಕಸನ , ಬೋಧನ ಸಾಮರ್ಥ್ಯ , ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ತರಬೇತಿಯನ್ನು ನೀಡಲಾಗುತ್ತದೆ.

ರಾಜ್ಯ ಮಟ್ಟದ ಕಾರ್ಯಾಗಾರ ಆಗಿರುವುದರಿಂದ ಪ್ರತಿ ಜಿಲ್ಲೆಯ ವಿದ್ಯಾಭಾರತಿ ಕರ್ನಾಟಕ ಸಂಯೋಜಿತ ಸಂಸ್ಥೆಯ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಶ್ರೀ ವಸಂತ ಮಾಧವ ಅವರು ಮಾತನಾಡಿದರು.

ಪೂರ್ವ ಸಿದ್ಧತಾ ಬೈಠಕ್ ನಲ್ಲಿ ಅತಿಥೇಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ಗುರುದಾಸ ಶೆಣೈ , ಆಡಳಿತಾಧಿಕಾರ ಶ್ರೀ ರಾಘವೇಂದ್ರ , ವಿದ್ಯಾಭಾರತಿ ಕರ್ನಾಟಕ ಪ್ರಾಂತ ಸಂಘಟನ ಕಾರ್ಯದರ್ಶಿ ಶ್ರೀ ಉಮೇಶ್ ಎಂ , ಪ್ರಾಂತ ಶೋಧ ಪ್ರಮುಖ್ ಶ್ರೀ ರಘುರಾಜ್ , ಪ್ರಾಂತ ಪ್ರಶಿಕ್ಷಣ ಪ್ರಮುಖ್ ಶ್ರೀಮತಿ ಆಶಾ ಬೆಳ್ಳಾರೆ , ಪ್ರಾಂತ ಶಿಶು ಶಿಕ್ಷಣ ಪ್ರಮುಖ್ ಶ್ರೀಮತಿ ಸ್ವರ್ಣ , ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಉಪಾಧ್ಯಕ್ಷರು ಶ್ರೀ ಚಂದ್ರಶೇಖರ್ ಪಡಿಯಾರ್ , ಜಿಲ್ಲಾ ಶಿಶು ಶಿಕ್ಷಣ ಸಹಪ್ರಮುಖ್ ಶ್ರೀಮತಿ ಅನುಸೂಯ , ಶ್ರೀ ಸಂತೋಷ್ ಪೂರ್ವ ಛಾತ್ರ ಪೋರ್ಟಲ್ ಜಿಲ್ಲಾ ಪ್ರಮುಖ್ , ಶ್ರೀ ವೇದವ್ಯಾಸ ತಂತ್ರಿ ಜಿಲ್ಲಾ ಸಂಸ್ಕೃತ ಪ್ರಮುಖ್ , ಸಂಸ್ಥೆಯ ಮುಖ್ಯೋಪಾಧ್ಯಾಯರು ಶ್ರೀ ಅರುಣ್ ಕುಮಾರ್ , ಶ್ರೀಮತಿ ಅನಿತಾ , ಶ್ರೀಮತಿ ಶಕುಂತಲಾ , ಶ್ರೀಮತಿ ಅಪರ್ಣಾ ಆಚಾರ್ , ಕಾಲೇಜು ಪ್ರಾಂಶುಪಾಲರು ಶ್ರೀ ಅಮರೇಶ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ ಸ್ವಾಗತಿಸಿ , ನಿರೂಪಿಸಿದರು.

 
 
 
 
 
 
 
 
 
 
 

Leave a Reply