ಉಡುಪಿಯ ಮರವಂತೆ ನಾಗರಾಜ ಹೆಬ್ಬಾರರಿಗೆ ಅಂತಾರಾಷ್ಟ್ರೀಯ ಚಾಣಕ್ಯ ಪ್ರಶಸ್ತಿ

ಗೋವಾದ ಪಣಜಿಯಲ್ಲಿರುವ ಹೋಟೆಲ್  ಫರ್ನ್ ಕದಂಬದಲ್ಲಿ  ನಡೆದ ೧೫ನೆಯ ಗ್ಲೋಬಲ್ ಕಮ್ಮುನಿಕೇಶನ್ ಕಾಂಕ್ಲೇವ್ ( ಅಂತಾರಾಷ್ಟ್ರೀಯ   ಸಮ್ಮೇಳನ) ದಲ್ಲಿ ಉಡುಪಿಯ ಮರವಂತೆ ನಾಗರಾಜ ಹೆಬ್ಬಾರರಿಗೆ ಅವರ ಸಾಧನೆಗಾಗಿ  ಅಂತಾರಾಷ್ಟ್ರೀಯ  “ಚಾಣಕ್ಯ ಪ್ರಶಸ್ತಿ” ನೀಡಿ ಗೌರವಿಸಲಾಯ್ತು.

ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ರವರು ಈ ಚಾಣಕ್ಯ ಪ್ರಶಸ್ತಿಯನ್ನು ಅದ್ದೂರಿ ಸಮಾರಂಭದಲ್ಲಿ ಮರವಂತೆ ನಾಗರಾಜ ಹೆಬ್ಬಾರರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ದೇಶ, ವಿದೇಶಗಳ ವಿವಿಧ ಕ್ಷೇತ್ರಗಳ ಸುಮಾರು 77ವ್ಯಕ್ತಿ ಹಾಗೂ 3ಸಂಸ್ಥೆಗಳು ಈ ಚಾಣಕ್ಯ ಪ್ರಶಸ್ತಿಗೆ ಭಾಜನರಾಗಿದ್ದು , ಕರ್ನಾಟಕ  ರಾಜ್ಯದ ಖ್ಯಾತ ಕನ್ನಡ ಸಿನಿಮಾ ಸಂಗೀತ ನಿರ್ದೇಶಕ ಹಂಸಲೇಖ ಸಹಿತ 11 ವ್ಯಕ್ತಿ ಹಾಗೂ 3 ಸಂಸ್ಥೆಗಳಿಗೆ ಈ ಪ್ರಶಸ್ತಿಗಳು ಲಭ್ಯವಾಗಿವೆ. 
 ಕರಾವಳಿ ಜಿಲ್ಲೆಗಳಿಂದ ಕೇವಲ ಮರವಂತೆ ನಾಗರಾಜ ಹೆಬ್ಬಾರ ಮಾತ್ರ ಈ ಪ್ರಶಸ್ತಿಗೆ ಆಯ್ಕೆಯಾಗಿರುವರು. ಪ್ರವಾಸೋದ್ಯಮದ ಕುರಿತಾದ ಬರಹ,  ಮರವಂತೆ ಮಟ್ಟದಲ್ಲಿ ಉಡುಪಿ ಪ್ರವಾಸೋದ್ಯಮದ ಪ್ರಚಾರ, ದೇಶಾದ್ಯಂತ ಕರ್ನಾಟಕ ಪ್ರವಾಸೋದ್ಯಮದ ಪ್ರಚಾರ, ವಿಶೇಷವಾಗಿ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ನಿರೂಪಿಸಿದ ಪ್ರೇರಣಾ ವಿಡಿಯೋಗಳು, ಟಿ.ವಿ.ಷೋಗಳು, ವೆಬಿನಾರಗಳು, ಸೆಮಿನಾರ್‌ಗಳ ನಿಯೋಜನೆ ಮತ್ತು ಭಾಗವಹಿಸುವಿಕೆಗಳನ್ನು ಪರಿಗಣಿಸಿ ಹೆಬ್ಬಾರರಿಗೆ ಈ ಪ್ರಶಸ್ತಿ ಲಭಿಸಿದೆ.

ಪ್ರಸ್ತುತ ಹೆಬ್ಬಾರರು ಉಡುಪಿ ಮತ್ತು ಮಂಗಳೂರಿನಲ್ಲಿ ಆಪ್ನಾ ಹಾಲಿಡೇಸ್ ಪ್ರವಾಸಿ ಸಂಸ್ಥೆಯನ್ನು ನಡೆಸುತ್ತಿರುವರು. ಈ ಸಂದರ್ಭದಲ್ಲಿ  ಪಿ.ಆರ್.ಸಿ.ಐ.ಸ್ಥಾಪಕ ಯೆಮ್.ಬಿ,ಜಯರಾಮ್ ಮತ್ತು ರಾಷ್ಟ್ರೀಯ ಅಧ್ಯಕ್ಷ ಡಾ. ನವೀನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.  

 
 
 
 
 
 
 
 
 
 
 

Leave a Reply