Janardhan Kodavoor/ Team KaravaliXpress
31.6 C
Udupi
Tuesday, May 24, 2022
Sathyanatha Stores Brahmavara

ತೆಂಕನಿಡಿಯೂರು : ಫಿಟ್ ಇಂಡಿಯಾ ಸಪ್ತಾಹದ ಪ್ರಯುಕ್ತ ಪೋಷಕರಿಗೆ ಫಿಟ್ನೆಸ್ ಕಾರ್ಯಕ್ರಮ

ಉಡುಪಿ : ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ತೆಂಕನಿಡಿಯೂರು ಇಲ್ಲಿ 75ನೇ ಆಜಾದ್ ಅಮೃತ್ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಸಪ್ತಾಹದ ಪ್ರಯುಕ್ತ ಪೋಷಕರಿಗೆ ಫಿಟ್ನೆಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪೂರ್ಣಿಮ ಜರ್ನಾಧನ್ ಭಾಗವಹಿಸಿ ಪೋಷಕರಿಗೆ ಅಮೃತ್ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದರು ಹಾಗೂ ವಿದ್ಯಾರ್ಥಿಗಳಿಗೆ ಎರಡು ವಿಷಯವಾದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಮತ್ತು 2047ನೇ ಇಸವಿಯಲ್ಲಿ ನನ್ನ ದೃಷ್ಟಿಯಲ್ಲಿ ಭಾರತ ಎಂಬ ವಿಷಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಪೋಸ್ಟ್ ಕಾರ್ಡ್ ನಲ್ಲಿ ಬರೆದು ಪ್ರಧಾನಮಂತ್ರಿಗೆ ಕಳುಹಿಸಲು ತಿಳಿಸಿದರು.

ಅಧ್ಯಕ್ಷತೆಯನ್ನು ಶಾಲೆಯ ಹಿರಿಯ ಸಹಶಿಕ್ಷಕಿಯಾದ ಸುಚೇತ ಯು. ಆರ್ ಉಪಸ್ಥಿತರಿದ್ದು ಪೋಷಕರಿಗೆ ಶುಭ ಹಾರೈಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮವನ್ನು ನಡೆಸಿದರು. ಶಾಲೆಯ ವಿದ್ಯಾರ್ಥಿಗಳು ,ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!