ಇಂಜಿನಿಯರ್ ಹರೀಶ್ ಮನೆಯಲ್ಲಿ ಬಗೆದಷ್ಟು ಕೆಜಿ ಚಿನ್ನಾಭರಣ

ಉಡುಪಿ: ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿಯಾಗಿದ್ದು, ಚಿನ್ನದ ತಟ್ಟೆ ಸೇರಿ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ನಗದು ಪತ್ತೆಯಾಗಿದೆ.

ಹರೀಶ್​ನ ವಿರುದ್ಧ ಗುತ್ತಿಗೆದಾರರು ಎಸಿಬಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ಹರೀಶ್ ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಮನೆಯೇ ಒಂದೂವರೆ ಕೋಟಿ ಬೆಲೆ ಬಾಳುತ್ತೆ. ಇಂದು ಬೆಳ್ಳಂಬೆಳಗ್ಗೆ ಹರೀಶ್ ಮನೆ​ ಸೇರಿ ರಾಜ್ಯಾದ್ಯಂತ 80 ಕಡೆಗಳಲ್ಲಿ ಒಟ್ಟು 21 ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಎಸಿಬಿ ಏಕಕಾಲಕ್ಕೆ ದಾಳಿ ಮಾಡಿದೆ.

ಹರೀಶ್​ ಮನೆಯಲ್ಲಿ ಚಿನ್ನದ ತಟ್ಟೆ, ಚಿನ್ನದ ತಗಡು, 15ಕ್ಕೂ ಹೆಚ್ಚು ಚಿನ್ನದ ಬಳೆ, 30ಕ್ಕೂ ಹೆಚ್ಚು ಚಿನ್ನದ ಸರ, ನೆಕ್ಲೆಸ್‌, ಬ್ರಾಸ್ಲೆಟ್‌ ಸೇರಿ ಎರಡು ಕೆಜಿ ಚಿನ್ನಾಭರಣ, ಸುಮಾರು 5 ಲಕ್ಷ ರೂಪಾಯಿ ನಗದು, ದುಬಾರಿ ಬೆಲೆಯ ವಾಚು, ಮೂರು ವಾಹನ, ಅಲ್ಲದೆ ಆಸ್ತಿ ಪತ್ರ ದಾಖಲೆಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ಸೇರಿ 15 ಅಧಿಕಾರಿಗಳ ತಂಡ ಮಹತ್ವದ ದಾಖಲೆಗಾಗಿ ಪರಿಶೀಲನೆ ನಡೆಸುತ್ತಿದೆ.

 
 
 
 
 
 
 
 
 
 
 

Leave a Reply