ಮಹತ್ವದ ಯೋಗ (ಯೋಗ ಗೀತೆ)~ಕೆ.ಪುಂಡಲೀಕ ನಾಯಕ್

ಯೋಗ ಮತ್ತು ಧ್ಯಾನದಲ್ಲಿ

ಮನಸ್ಸು ಕೇಂದ್ರೀಕರಿಸಬೇಕು.

ರೋಗ ಮುಕ್ತರಾಗಲು 

ದಿನವೂ ಯೋಗ ಮಾಡಬೇಕು.

ಯೋಗದಿಂದಾಗುವುದು

ತನು ಮನ ಶುದ್ಧಿ :

ಲಭಿಸುವುದು ನೆಮ್ಮದಿಯು

ಆರೋಗ್ಯ ವೃದ್ಧಿ .

ಬಹಳಲ್ಲ ದಿದ್ದರೂ ತುಸು 

ಮಾಡಿ ಧ್ಯಾನ.

ಸಹನೆ ಶಾಂತಿಯಲಿ  

ಅರಳುವುದು ತನು ಮನ.

ದಿನವೂ ಗಡಿಬಿಡಿಯ 

ಧಾವಂತದ ಬದುಕು.

ಯೋಗ ಒಂದೇ ಪರಿಹಾರ 

ಇದಕ್ಕೆ ನಿಜಕ್ಕೂ.

ಸುಗಮ ಜೀವನಕೆ

ಹಾದಿಯೊಂದೇ ಯೋಗ.

ಇದು ನೆಮ್ಮದಿಯ 

ಬದುಕಿನ ಯಾಗ.

ಯೋಗ ಮತ್ತು ಧ್ಯಾನ 

ಎರಡೂ ಅನಿವಾರ್ಯ.

ಆತ್ಮ ಮತ್ತು ಮನಸ್ಸು 

ಅರಳಲು ಪರ್ಯಾಯ.

~ಕೆ.ಪುಂಡಲೀಕ ನಾಯಕ್.

 
 
 
 
 
 
 
 
 

Leave a Reply